ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಸ್ಥೆ ಗೋಣಿಕೊಪ್ಪಲಿನಲ್ಲಿ ಆಯೋಜಿಸಿದ್ದ ಕೊಡಗಿನ ಗಾಂಧಿ ಖ್ಯಾತಿಯ ಪಂದ್ಯAಡ ಬೆಳ್ಯಪ್ಪ 60ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಮಂಡೇಪAಡ ಸುಜಾ ಕುಶಾಲಪ್ಪ, ತೀತಿರ ಧರ್ಮಜ ಉತ್ತಪ್ಪ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಾಚಿಮಂಡ ಸುವಿನ್ ಗಣಪತಿ, ಕಾಳೇಗೌಡ, ಪ್ರತಿಮಾ ಕಾರ್ಯಪ್ಪ, ಕಳ್ಳಿಚಂಡ ದೀನಾ ಉತ್ತಪ್ಪ ಮತ್ತಿತರರು ಇದ್ದರು.
ಪಂದ್ಯoಡ ಬೆಳ್ಯಪ್ಪ ಕೊಡಗು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿದ್ದ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರ ಎಂದು ವಿಧಾನಮರಿಷತ್ತು ಸದಸ್ಯ ಮಂಡೇಪoಡ ಸುಜಾ ಕುಶಾಲಪ್ಪ ಹೇಳಿದರು. ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಸ್ಥೆ ಗೋಣಿಕೊಪ್ಪಲಿನಲ್ಲಿ ಭಾನುವಾರ ಆಯೋಜಿಸಿದ್ದ ಕೊಡಗಿನ ಗಾಂಧಿ ಖ್ಯಾತಿಯ ಸ್ವಾತಂತ್ರ‍್ಯ ಹೋರಾಟಗಾರ ಪಂದ್ಯoಡ ಬೆಳ್ಯಪ್ಪ ಅವರ 60ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಧೀಮಂತ ನಾಯಕ ಪಂದ್ಯoಡ ಬೆಳ್ಯಪ್ಪ ಅವರ ತ್ಯಾಗ, ಆದರ್ಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು.
ಅವರ ಬದುಕು ಇಂದಿನ ಪೀಳಿಗೆ ಆದರ್ಶಪ್ರಾಯವಾಗಿರಬೇಕು. ಕೊಡಗಿನಿಂದ ಸುಮಾರು ಮುನ್ನೂರಕ್ಕೂ ಅಧಿಕ ಸ್ವಾತಂತ್ರ‍್ಯ ಹೋರಾಟಗಾರರು, ನೂರಕ್ಕೂ ಅಧಿಕ ಮಹಿಳೆಯರು ಸ್ವಾತಂತ್ರ‍್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಇಂಥವರ ಪುತ್ಥಳಿಗಳು ಗ್ರಾಮ ಗ್ರಾಮಗಳಲ್ಲಿಯೂ ನಿರ್ಮಾಣ ಆಗಬೇಕು.
ಈ ನಿಟ್ಟಿನಲ್ಲಿ ಯುಕೊ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಕೊಡಗಿನ ಆಸ್ಮಿತೆ ಕಾಪಾಡುವ ಸಲುವಾಗಿ ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಡಗು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಿಂಡ ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ಮಹತ್ವದ ಆಯಾಮ ನೀಡಿದವರು ಪಂದ್ಯAಡ ಬೆಳ್ಯಪ್ಪ. ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ದೇಶದ ಸ್ವಾತಂತ್ರ‍್ಯಕ್ಕೆ ಹೋರಾಡಿದ ಅವರ ಬದ್ಧತೆಯನ್ನು ಈಗ ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮಾಧ್ಯಮ ಜಗತ್ತು ವಿಸ್ತಾರವಾಗಿರುವ ಇಂದಿನ ಕಾಲದಲ್ಲಿ ಹೆಸರು ಗಳಿಸುವುದು ಸುಲಭದ ಮಾತು. ಆದರೆ ಯಾವುದೂ ಇಲ್ಲದ ಕಾಲದಲ್ಲಿ ತಮ್ಮ ಬದುಕಿನ ಬಗ್ಗೆಯೇ ಭರವಸೆ ಇಲ್ಲದಿದ್ದ ಕಾಲಘಟ್ಟದಲ್ಲಿ ಜನರನ್ನು ಸಂಘಟಿಸಿ, ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಿ ನಾಯಕತ್ವ ಬೆಳೆಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಇಂಥ ಮಹಾತ್ಮರನ್ನು ಸದಾ ಕಾಲ ಸ್ಮರಿಸುವ ಪುಣ್ಯ ಕಾರ್ಯ ಆಗಬೇಕು ಎಂದರು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಸ್ವಾತಂತ್ರ‍್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ, ಜೀವನದುದ್ದಕ್ಕೂ ಆದರ್ಶಪ್ರಾಯರಾಗಿ ಜೀವಿಸಿದ ಅಪ್ಪಟ ದೇಶಭಕ್ತ, ಗಾಂಧಿವಾದಿ ಪಂದ್ಯAಡ ಬೆಳ್ಯಪ್ಪ ಅವರಂತಹ ಆದರ್ಶಪ್ರಾಯರ ತ್ಯಾಗ ಬಲಿದಾನ, ಆದರ್ಶಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಗುವ ಹಂತಕ್ಕೆ ಬಂದು ತಲುಪಿದೆ. ಇಂತಹ ಆದರ್ಶ ಪ್ರಾಯರ ಬದುಕು ಈ ನೆಲದ ಆಸ್ಮಿತೆಯ ಪ್ರತೀಕವಾಗಿವೆ. ಒಂದೆಡೆ ಇಂತಹ ಕೊಡಗಿನ ನೈಜ ಇತಿಹಾಸಗಳು ತಿರುಚಲ್ಪಡುತ್ತಿದೆ. ಮತ್ತೊಂದೆಡೆ ಅವಕಾಶ ಸಿಂಧು ಖೊಟ್ಟಿ ಇತಿಹಾಸಗಳು ಸೃಷ್ಠಿಯಾಗುತ್ತಿದೆ. ಈ ರೀತಿಯ ಬೆಳವಣಿಗೆಗಳು ನೆಲದ ಅಸ್ಥಿತ್ವಕ್ಕೆ ದಕ್ಕೆಯುಂಟುಮಾಡುತ್ತಿವೆ. ಆದ್ದರಿಂದ ಕೊಡಗಿನ ನೈಜ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ಕೆ ನಾವು ನಾಂದಿ ಹಾಡಿದ್ದೇವೆ.
ನಮ್ಮ ಬೇಡಿಕೆಗೆ ಸ್ಪಂದಿಸಿ ಶಾಸಕ ಪೊನ್ನಣ್ಣ ಇಲ್ಲಿ ಪಂದ್ಯAಡ ಬೆಳ್ಯಪ್ಪನವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಪ್ರತಿಮೆಗೆ ಮೌಲ್ಯವನ್ನು ತುಂಬಬೇಕಾದ ಕೆಲಸ ನಮ್ಮಿಂದಾಗಬೇಕಿದೆ. ಈ ನಿಟ್ಟಿನಲ್ಲಿ ಕೊಡಗಿನ ಗಾಂಧಿ ಪಂದ್ಯAಡ ಬೆಳ್ಯಪ್ಪನವರ 60ನೇ ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಗೋಣಿಕೊಪ್ಪಲು ಠಾಣಾಧಿಕಾರಿ ಕಾಳೇಗೌಡ, ಕ್ರೈಂ ವಿಭಾಗದ ವೆಂಕಟೇಶ್, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಯುಕೊ ಸದಸ್ಯರಾದ ಚೆಪ್ಪುಡೀರ ಪ್ರತಿಮಾ ಕಾರ್ಯಪ್ಪ, ಕಳ್ಳಿಚಂಡ ದೀನಾ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಕುಂಜಿಲAಡ ಗ್ರೇಸಿ ಪೂಣಚ್ಚ, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಪುದಿಯೊಕ್ಕಡ ರಮ್ಯ ವಿಪನ್, ನೆಲ್ಲಮಕ್ಕಡ ಮಾದಯ್ಯ, ಚೆಪ್ಪುಡೀರ ಸಂಜು ಕರುಂಬಯ್ಯ, ಮಚ್ಚಮಾಡ ರಮೇಶ್, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ಕಳ್ಳಿಚಂಡ ರಾಬೀನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ಕೊಟ್ಟಂಗಡ ಮೊಣ್ಣಪ್ಪ, ಬೊಳ್ಳಿಯಂಗಡ ಬೋಪಣ್ಣ, ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್,ಕಳ್ಳಿಚಂಡ ದ್ರುವ ಕಾರ್ಯಪ್ಪ, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಸುನಿತ ಗಿರೀಶ್ ಮತ್ತಿತರರು ಇದ್ದರು.