ಚೆಯ್ಯಂಡಾಣೆ ಪೇಟೆಯಲ್ಲಿ ಸುರಿದ ಮಳೆಗೆ ಮನೆಯ ತಡೆಗೋಡೆ ಕುಸಿದಿರುವುದು. 
ಕೊಡಗು

ಚೆಯ್ಯಂಡಾಣೆಯಲ್ಲಿ ತಡೆಗೋಡೆ ಕುಸಿತ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಟವರ್ ಸೆಟ್‌ಅಪ್ ರೂಮ್‌ಗೆ ಹಾನಿ
ನಾಪೋಕ್ಲು: ಸಮೀಪದ ಚೆಯ್ಯಂಡಾಣೆ ಪೇಟೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಮನೆಯ ತಡೆಗೋಡೆ ಕುಸಿದು ಮೊಬೈಲ್ ಟವರ್ ಸೆಟ್‌ಅಪ್ ರೂಮ್‌ಗೆ ಹಾನಿಯಾಗಿದೆ. ಚೆಯ್ಯಂಡಾಣೆ ಪೇಟೆ ನಿವಾಸಿ ಬಿ.ಆರ್.ಸುರೇಶ್ ಮನೆಯ ತಡೆಗೋಡೆ ಕುಸಿದಿರುವುದು. ಇದರಿಂದ ಕೆಲ ಸಮಯ ಮೊಬೈಲ್ ನೆಟ್‌ವರ್ಕ್ ಸಿಗದೆ ಮೊಬೈಲ್ ಗ್ರಾಹಕರಿಗೆ ಸಮಸ್ಯೆ ಎದುರಾಯಿತು.. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.