ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ನಾಪೋಕ್ಲು ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಅಪ್ಪುಮನಿಯಂಡ ಬನ್ಸಿ ಭೀಮಯ್ಯ, ಗೋವರ್ಧನ್ ಶೆಟ್ಟಿ, ಬಾಲಕೃಷ್ಣ ಇತರರು ಇದ್ದರು.
ನಾಪೋಕ್ಲು: ನಾಪೋಕ್ಲು ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಕೊಡವ ಸಮಾಜದಲ್ಲಿ ಜರುಗಿತು.
ನಿರ್ಗಮಿತ ಅಧ್ಯಕ್ಷ ಮಾದೇಯಂಡ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಲಯನ್ಸ್ ಫಸ್ಟ್ ಪ್ರಾಂತಪಾಲ ಗೋವರ್ಧನ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಲಯನ್ಸ್ ಕ್ಲಬ್ಬಿನ ಧ್ಯೇಯ ಉದ್ದೇಶಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ, ನಿರ್ಗಮಿತ ಖಜಾಂಜಿ ಅಪ್ಪಚೇಟ್ಟೊಳಂಡ ವಸಂತ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಅಪ್ಪುಮನಿಯಂಡ ಬನ್ಸಿ ಭೀಮಯ್ಯ, ಕಾರ್ಯದರ್ಶಿಯಾಗಿ ಚೈಯಂಡ ರಘು ತಿಮ್ಮಯ್ಯ, ಖಜಾಂಜಿ ಬೊಪ್ಪೇರ ಜಯ ಉತ್ತಪ್ಪ ಮತ್ತು ಇನ್ನಿತರರು ಹಾಗೂ ಲಿಯೋ ಕ್ಲಬ್ ಕ್ಲಬ್ಬಿನ ಅಧ್ಯಕ್ಷರಾಗಿ ಅಂಕುರ್ ಪಬ್ಲಿಕ್ ವಿದ್ಯಾರ್ಥಿಗಳಾದ ಧ್ರುವ ದೇವಯ್ಯ, ಕಾರ್ಯದರ್ಶಿಯಾಗಿ ರಿಚ ಪೂಣಚ್ಚ, ಖಜಾಂಜಿ ಹೇಮಾವತಿ ಇನ್ನಿತರರು ಅಧಿಕಾರ ವಹಿಸಿಕೊಂಡರು.