ಮಕ್ಕಳ ತಜ್ಞ ವೈದ್ಯ ಮೇ. ಡಾ. ಕುಶ್ವಂತ್ ಕೋಳಿಬೈಲು ಅವರ ಬೈಲುಕೊಪ್ಪೆಯ ಬೌದ್ಧರು ಎಂಬ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮತ್ತಿತರರು ಇದ್ದರು. 
ಕೊಡಗು

ಬೈಲುಕೊಪ್ಪೆಯ ಬೌದ್ಧರು ಪುಸ್ತಕ ಬಿಡುಗಡೆ

ಸುನಿಲ್ ಪೊನ್ನೇಟಿ
ಮಡಿಕೇರಿ
ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿರುವ ಮೇ. ಡಾ. ಕುಶ್ವಂತ್ ಕೋಳಿಬೈಲು ಅವರ ಬೈಲುಕೊಪ್ಪೆಯ ಬೌದ್ಧರು ಎಂಬ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಏ.15) ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕದ ಸಾಮರಸ್ಯದ ತಾಣಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಪುಸ್ತಕ ಮಾಲಿಕೆಗಳ ಪೈಕಿ ಈ ಪುಸ್ತಕವೂ ಒಂದಾಗಿದೆ. ಈ ಪುಸ್ತಕವನ್ನು ಸÀರ್ಕಾರಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕದ ಸಾಮರಸ್ಯದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹೊರತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.