ಬ್ಯಾಗ್‌ಲೆಸ್ ಡೇ ಅಂಗವಾಗಿ ವಿಘ್ನೇಶ್ವರ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.
ಶನಿವಾರಸಂತೆ: ಸ್ಥಳೀಯ ಸನ್ನಿಧಿ ಅಂಗವಿಕಲ ಮಕ್ಕಳ ಶಾಲೆ ವತಿಯಿಂದ ಶನಿವಾರಸಂತೆ ಶ್ರೀವಿಘ್ನೇಶ್ವರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಬ್ಯಾಗ್‌ಲೆಸ್ ಡೇ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಸಂವಾದ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಂಗವಿಕಲ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಾದ ಪ್ರಾರ್ಥನಾ, ಕನಕ, ಶಫಿಕ್, ಧನುಷ್, ಸಮೀರ್ ನೃತ್ಯ ಮತ್ತು ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ವಿದ್ಯಾರ್ಥಿಗಳು ಹಾಗೂ ಕಿರುತೆರೆ ಡಿಕೆಡಿ ಖ್ಯಾತಿಯ ಸಮೀರ್ ನೃತ್ಯ ಪ್ರದರ್ಶನ ನೀಡಿದ ಮೂಲಕ ಸಭಿಕರನ್ನು ರಂಜಿಸಿದರು.
ಅಂಗವಿಕಲ ಮಕ್ಕಳ ಶಾಲೆಯ ಶಿಕ್ಷಕಿಯರಾದ ಕಾವ್ಯಾ, ಭಾಗ್ಯಲಕ್ಷ್ಮೀ, ಶ್ರೀವಿಘ್ನೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹಮ್ಮದ್ ಜಹೀರ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಚಿತ್ರಾ, ವಿದ್ಯಾಸಂಸ್ಥೆ ಶಿಕ್ಷಕರಾದ ಕೆ.ಪಿ.ಜಯಕುಮಾರ್, ಕೆ.ಪಿ.ಸಂದೇಶ್, ಅಂಜಿನಪ್ಪ, ಸವಿತ, ಶ್ರೀಕಲಾ, ಉಪನ್ಯಾಸಕರಾದ ಸರ್ಫ್ರಾಜ್ ಆಹಮ್ಮದ್, ತೀರ್ಥಾನಂದ್, ಭವ್ಯಾ ಮುಂತಾದವರು ಹಾಜರಿದ್ದರು.