ಕೊಡ್ಲಿಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಟೆಕ್ಸಾಸ್ ಕಂಪನಿಯಿಂದ ಶನಿವಾರ ಲೇಖನ ಸಾಮಗ್ರಿ ವಿತರಿಸಲಾಯಿತು. ಸೇವಾ ಪ್ರತಿನಿಧಿ ಮ್ಯೆದೀನ್ ಅಬ್ಬು ಶಿರಂಗಾಲ, ಮುಖ್ಯ ಶಿಕ್ಷಕಿ ಅಶಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಇತರರು ಇದ್ದರು.  
ಕೊಡಗು

ಕೊಡ್ಲಿಪೇಟೆ ಸರ್ಕಾರಿ ಶಾಲೆಮಕ್ಕಳಿಗೆ ಬ್ಯಾಗ್ ವಿತರಣೆ

ಎ. ಆರ್. ರಘುರಾಮ
ಶನಿವಾರಸಂತೆ: ಕೊಡ್ಲಿಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ
ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಟೆಕ್ಸಾಸ್ ಕಂಪನಿ ವತಿಯಿಂದ ಶನಿವಾರ
ಬ್ಯಾಗ್ ಮತ್ತು ಲೇಖನ ಸಾಮಗ್ರಿ ವಿತರಿಸಲಾಯಿತು.
ಶಾಲೆಯ 220 ವಿದ್ಯಾರ್ಥಿಗಳು, ಸ್ಥಳೀಯ ಉರ್ದು ಶಾಲೆ, ದೊಡ್ಡಕೊಡ್ಲಿ,
ಬ್ಯಾಡಗೊಟ್ಟ, ಊರುಗುತ್ತಿ ,ಮೂದ್ರವಳ್ಳಿ ಶಾಲೆ ಮಕ್ಕಳು ಸೇರಿದಂತೆ ಒಟ್ಟು 350 ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್, ಪೆನ್, ಪೆನ್ಸಿಲ್, ಪೌಚ್, ಕ್ರಯಾನ್ಸ್, ಥರ್ಮಲ್ ಫ್ಲಾಸ್ಕ್, ಸ್ಟೋರಿ ಬುಕ್ ಸೇರಿದಂತೆ
ಗುಣಮಟ್ಟದ ಸಾಮಗ್ರಿಗಳನ್ನು ನೀಡಲಾಯಿತು.
ಪ್ರತಿ ವರ್ಷವೂ ಶಾಲಾರಂಭದ ಸಮಯದಲ್ಲಿ ಈ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಿಕ್ಷಣಕ್ಕೆ ಪೂರಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುವುದು ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ಸೇವಾ ಪ್ರತಿನಿಧಿ ಮ್ಯೆದೀನ್ ಅಬ್ಬು ಶಿರಂಗಾಲ, ಶಾಲೆಯ ಮುಖ್ಯ ಶಿಕ್ಷಕಿ ಅಶಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.