ಮೈಸೂರಿನ ಯೋಗಾನಂದ ನೇತೃತ್ವದ ಪೃಥ್ವಿ ಕಲಾ ತಂಡ ಬೀದಿ ನಾಟಕದ ಮೂಲಕ ಎಮ್ಮೆಗುಂಡಿ, ಹೊಸಹಳ್ಳಿ ಮತ್ತು ಮಾರ್ಗೋಳ್ಳಿ ಎಸ್ಟೇಟ್‌ಗಳಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ತಡೆ ಸಂಬಂಧ ಜಾಗೃತಿ ಮೂಡಿಸಿತು.
ಸಿದ್ದಾಪುರ: ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವೃಷಿನಿ ಅವರ ನಿರ್ದೇಶನದಂತೆ ವಿರಾಜಪೇಟೆ ವಿಭಾಗದ ತಿತಿಮತಿ ವಲಯದಿಂದ, ಹ್ಯೂಮನ್ ವಲ್ಡ್ ಫಾರ್ ಅನಿಮಲ್ ಹಾಗೂ ಟಾಟಾ ಟೀ ಪಾಲಿಬೆಟ್ಟ ಇವರ ಸಹಯೋಗದಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ತಡೆಗೆ ಬೀದಿ ನಾಟಕಗಳ ಮೂಲಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಎಮ್ಮೆಗುಂಡಿ, ಹೊಸಹಳ್ಳಿ ಮತ್ತು ಮಾರ್ಗೋಳ್ಳಿ ಎಸ್ಟೇಟ್‌ಗಳಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಕಾರ್ಮಿಕರು ಹಾಗೂ ಸ್ಥಳೀಯರಿಗೆ ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಲಾಯಿತು.
ಸಮಾರೋಪದಲ್ಲಿ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಮಾತನಾಡಿದರು. ಎರಡು ದಿನಗಳಲ್ಲಿ ಏಳು ವಿಭಾಗಗಳಲ್ಲಿ ಮೈಸೂರಿನ ಯೋಗಾನಂದ ನೇತೃತ್ವದ ಪೃಥ್ವಿ ಕಲಾ ತಂಡ ಬೀದಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿತು. ಅರಣ್ಯ ಇಲಾಖೆ ಅಧಿಕಾರಿಗಳು, ಎಸ್ಟೇಟ್ ನಿರ್ವಹಣಾ ಸಿಬ್ಬಂದಿ, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.