ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಗೋಣಿಕೊಪ್ಪಲು ಸಂಸ್ಥೆ 6 ಪ್ರಶಸ್ತಿಗಳನ್ನು ಪಡೆದುಕೊಂಡಿತು. ಬಿ.ಎನ್. ಪ್ರಕಾಶ್, ನಾಗೇಶ್ ಎಂ.ಎಂ., ಪೊನ್ನಲತಂಡ ಕಿರಣ್ ಪೊನ್ನಪ್ಪ ಮತ್ತಿತರರು ಇದ್ದರು.
- Gonigoppalu Senior Chamber
ಗೋಣಿಕೊಪ್ಪಲು: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಗೋಣಿಕೊಪ್ಪಲು ಸಂಸ್ಥೆ ಪ್ರಸ್ತುತ ವರ್ಷದ ವಿವಿಧ ಸಾಧನೆಗಳಿಗೆ ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿನ ತಂಡ ಕಳೆದ ಒಂದು ವರ್ಷದಿಂದ ಮಾಡಿರುವ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.
ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಸಂಘದ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ 25ನೇ ನ್ಯಾಷನಲ್ ಕಾನ್‌ಕೋರ್ಸ್ ವಿಜಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅತ್ಯುತ್ತಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ವಿನ್ನರ್ಸ್ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್‌ಗೆ ನೀಡಿದರೆ, ಅತ್ಯುತ್ತಮ ಲೀಜನ್ ಅಧಿಕಾರಿ ರನ್ನರ್ ಪ್ರಶಸ್ತಿಯನ್ನು ಸೀನಿಯರ್ ನಾಗೇಶ್ ಎಂ.ಎಂ. ಪಡೆದುಕೊಂಡಿದ್ದಾರೆ. ಎನ್‌ಡಿ ಶ್ರೇಷ್ಠತೆ ಪ್ರಶಸ್ತಿ ಏರಿಯಾ ಡಿ ಗೋಣಿಕೊಪ್ಪಲು ಲೀಜನ್ ಪಾಲಾಗಿದೆ. ಜತೆಗೆ ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ಗಣನೀಯ ಸಾಧನೆಗಾಗಿ ಅಭಿನಂದನಾ ಪ್ರಶಸ್ತಿ ಮತ್ತು ಸ್ಪರ್ಧೆಯ ನಿಯಮ ಪಾಲನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸೀನಿಯರ್ ಪಿಪಿಎಫ್ ಪೊನ್ನಲತಂಡ ಕಿರಣ್ ಪೊನ್ನಪ್ಪ ಅತ್ಯುತ್ತಮ ಲೀಜನ್ ಸದಸ್ಯ ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಗೋಣಿಕೊಪ್ಪದ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಿ.ಎನ್. ಪ್ರಕಾಶ್, ಕಾರ್ಯದರ್ಶಿ ನಾಗೇಶ್, ಖಜಾಂಜಿ ಮೇಕೆರಿರ ಮೋಹನ್, ನಿಕಟಪೂರ್ವ ಅಧ್ಯಕ್ಷ ಪೊನ್ನಲತಂಡ ಕಿರಣ್ ಪೊನ್ನಪ್ಪ, ಡಾ. ಶರತ್, ರಾಷ್ಟ್ರೀಯ ಸಂಯೋಜಕ ಎಂ.ಎನ್. ಉತ್ತಪ್ಪ ಪಾಲ್ಗೊಂಡಿದ್ದರು.