ನಾಪೋಕ್ಲು-ಭಾಗಮಂಡಲ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಆಟೋ ಚಾಲಕರು , ಸಾರ್ವಜನಿಕರು ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು. ಕಿರಣ್ ಕೋಟೆರಿ, ಗೌತಮ ಚೋ ನಕೆರೆ, ಇಬ್ರಾಹಿಂ ಕೊಟ್ಟಮುಡಿ, ಆಸಿಫ್ ಎಮ್ಮೆಮಾಡು, ಚರಣ್ ಇತರರಿದ್ದರು. 
ಕೊಡಗು

ರಸ್ತೆ ದುರಸ್ತಿಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ನಾಪೋಕ್ಲು-ಭಾಗಮಂಡಲ ರಸ್ತೆ ದುಸ್ಥಿತಿ
  • ಸರ್ಕಾರದ ಗಮನ ಸೆಳೆಯಲು ಆಟೋ ಚಾಲಕರು, ಸಾರ್ವಜನಿಕರು
ನಾಪೋಕ್ಲು: ನಾಪೋಕ್ಲು-ಭಾಗಮಂಡಲ ರಸ್ತೆ ದುಸ್ಥಿತಿ ಕುರಿತು ಸರ್ಕಾರದ ಗಮನ ಸೆಳೆಯಲು ಆಟೋ ಚಾಲಕರು, ಸಾರ್ವಜನಿಕರು ಭಾನುವಾರ ಎಮ್ಮೆಮಾಡು-ಚೋನಕೆರೆ ರಸ್ತೆಯಲ್ಲಿ ಬಾಳೆಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದರು.
ಹಳೇ ತಾಲೂಕಿನಿಂದ ಎಮ್ಮೆಮಾಡು ಜಂಕ್ಷನ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಸಾಧ್ಯವಾಗುತ್ತಿಲ್ಲ. ಆಟೋ ಚಾಲಕರು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಆಟೋ ಚಾಲಕರು, ಸಾರ್ವಜನಿಕರು ಆಗ್ರಹಿಸಿದರು.
ರಸ್ತೆ ಅವ್ಯವಸ್ಥೆ ಕುರಿತು ಅನೇಕ ಭಾರಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರೂ ಅನುದಾನದ ಕೊರತೆ ಇದೆ ಎನ್ನುವ ಉತ್ತರ ಬರುತ್ತಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ಕೂಡ ಆರಂಭಗೊಂಡಿಲ್ಲ. ಹದಗೆಟ್ಟ ರಸ್ತೆಯಿಂದ ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ರಸ್ತೆಯಲ್ಲಿ ಜನರು ಅಡ್ಡಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಶಾಸಕರು ಇತ್ತ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು .ತಪ್ಪಿದಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳನ್ನು ಹಾಕಿ ಸಂಪೂರ್ಣ ರಸ್ತೆ ಬಂದ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಿರಣ್ ಕೋಟೆರಿ, ಗೌತಮ ಚೋ ನಕೆರೆ, ಇಬ್ರಾಹಿಂ ಕೊಟ್ಟಮುಡಿ, ಆಸಿಫ್ ಎಮ್ಮೆಮಾಡು, ಚರಣ್ ಇತರರಿದ್ದರು.