ಎಡಿಕೇರಿ ಪ್ರಸನ್ನ 
ಕೊಡಗು

ಗೌತಮ್ ಮೇಲೆ ಹಲ್ಲೆ ಖಂಡನೀಯ

ಸುನಿಲ್ ಪೊನ್ನೇಟಿ
ಮಡಿಕೇರಿ:
ಹಿಂದೂ ಕಾರ್ಯಕರ್ತ ಗೌತಮ್ ಮೇಲೆ ಶುಕ್ರವಾರ ಸಂಜೆ ಅನ್ಯಕೋಮಿನ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಯತ್ನ ಮಾಡಿರುವುದು ಖಂಡನೀಯ ಎಂದು ಉದ್ಯಮಿ, ಮತ್ತು ಸಮಾಜ ಸೇವಕ ಎಡಿಕೇರಿ ಪ್ರಸನ್ನ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಎಂದೂ ಇಲ್ಲದ ಘೋರ ಕೃತ್ಯಗಳು ಆರಂಭವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಸ್ವಚ್ಛ ಬಾಂಧವ್ಯ ಮತ್ತು ಒಡನಾಟಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದ್ದು ಹಿಂದೂಗಳ ತಾಳ್ಮೆಯನ್ನು ಯಾರೂ ಕೆಣಕಬಾರದು. ಕಳೆದ ವಾರವಷ್ಟೇ ಬಿರುನಾಣಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮಕ್ಕಾಗಿ ಹಾಕಿದ್ದ ಬಂಟಿAಗ್ಸ್ ಕಿತ್ತೊಯ್ದ ಪ್ರಕರಣದಲ್ಲೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಒಂದೇ ವಾರದ ಅಂತರದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಕೊಲೆಯತ್ನ ನಡೆದಿರುವುದು ಕೊಡಗು ಎತ್ತ ಸಾಗುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕೊಲೆಯತ್ನ ಪ್ರಕರಣÀ ದಾಖಲಿಸಿರುವ ಪೊಲೀಸ್ ಇಲಾಖೆ ತನಿಖಾ ಸಂದರ್ಭದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ವರದಿ ನೀಡದೆ ಇದ್ದಲ್ಲಿ ಹಿಂದೂ ಕಾರ್ಯಕರ್ತರೆಲ್ಲರೂ ನ್ಯಾಯಕ್ಕಾಗಿ ಬೀದಿಗಿಳಿಬೇಕಾಗುತ್ತದೆ ಎಂದು ಹೇಳಿದ್ದಾರೆ.