ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಕೊಡವ ಧಾರಾವಾಹಿಗಳ ನಿರ್ದೇಶಕ ದಿ.ಎ.ಟಿ.ರಘು ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಬಯವಂಡ ಬಿನು ಸಚಿನ್, ನೆರವಂಡ ಉಮೇಶ್, ಪುಗ್ಗೇರ ಆಕಾಶ್, ಅಲ್ಲಾರಂಡ ವಿಠಲ್ ನಂಜಪ್ಪ, ಚೆರುವಾಳಂಡ ಸುಜಲ ನಾಣಯ್ಯ ಮತ್ತಿತರರು ಇದ್ದರು. 
ಕೊಡಗು

ಎ.ಟಿ.ರಘು ಸಿನಿ ಪಯಣದ ಹೆಬ್ಬುಲಿ ಪುಸ್ತಕ ಬಿಡುಗಡೆ

ಎಂ.ರವಿ

ಎಟಿಆರ್ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ವಿರಾಜಪೇಟೆ: ಕೊಡಗು ಕಲಾವಿದರ ಸಂಘದ ವತಿಯಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ಕೊಡವ ಧಾರಾವಾಹಿಗಳ ನಿರ್ದೇಶಕ ದಿ. ಎ.ಟಿ.ರಘು ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ವಿರಾಜಪೇಟೆಯಲ್ಲಿ ಶನಿವಾರ ಭಾವಪೂರ್ಣವಾಗಿ ನೆರವೇರಿತು.
ನಗರದ ಕೆ.ಕೆ. ಗ್ರೂಪ್ಸ್ ಸಭಾಂಗಣದಲ್ಲಿ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ತಂತ್ರಜ್ಞ ಸುರೇಶ್ ಪಿ.ಹುಲಿಕೇರಿ ರಚಿಸಿರುವ ಎ.ಟಿ.ರಘು ಅವರ ಸಿನಿ ಪಯಣದ ಹೆಬ್ಬುಲಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಲೇಖಕಿ ಉಳುವಂಗಡ ಕಾವೇರಿ ಉದಯ ರಚಿಸಿರುವ ಎ.ಟಿ. ರಘು ಸ್ಮರಣಾರ್ಥ ಸಾಹಿತ್ಯವನ್ನು ಟಿ.ಡಿ. ಮೋಹನ್ ಅವರು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು.
ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಎ.ಟಿ.ರಘು ಪುತ್ರಿ ಬಯವಂಡ ಬಿನು ಸಚಿನ್, ವ್ಯಕ್ತಿ ಜೀವಂತವಾಗಿರುವಾಗ ವ್ಯಕ್ತಿತ್ವದ ಮಹತ್ವ ತಿಳಿಯುವುದಿಲ್ಲ. ಆದರೆ ಅಗಲಿಕೆಯ ನಂತರ ಮಹತ್ವ ಭಾವಪೂರ್ಣವಾಗುತ್ತದೆ. ಕೊಡಗು ಕಲಾವಿದರ ಸಂಘದ ಕಲಾವಿದರಿಂದ ದೊರೆತ ಪ್ರೀತಿ, ಗೌರವಕ್ಕೆ ಸದಾ ಚಿರಋಣಿ ಎಂದು ಹೇಳಿದರು.
ಸಿನಿಮಾ ತಂತ್ರಜ್ಞ ಸುರೇಶ್ ಪಿ.ಹುಲಿಕೇರಿ ಮಾತನಾಡಿ ಹಿರಿಯರಾದ ಎ.ಟಿ.ರಘು ಅವರೊಂದಿಗಿನ ಕಳೆದ 12 ವರ್ಷಗಳ ಒಡನಾಟ ಅವಿಸ್ಮರಣೀಯವೆಂದರು.
ಕಲಾವಿದರಾದ ನೆರವಂಡ ಉಮೇಶ್, ಪುಗ್ಗೇರ ಆಕಾಶ್, ಅಲ್ಲಾರಂಡ ವಿಠಲ್ ನಂಜಪ್ಪ, ಚೆರುವಾಳಂಡ ಸುಜಲ ನಾಣಯ್ಯ ಹಾಗೂ ತಾತಂಡ ಪ್ರಭಾ ನಾಣಯ್ಯ ಎ.ಟಿ.ರಘು ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಉಳುವಂಗಡ ಕಾವೇರಿ ಉದಯ್ ಕವನ ವಾಚನ ಮಾಡಿದರು. ತಾತಂಡ ಶ್ರೇಯ ಸೋಮಣ್ಣ ಭರತನಾಟ್ಯದ ಮೂಲಕ ಗಮನ ಸೆಳೆದರು.
ಟಿ.ಡಿ.ಮೋಹನ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಕ್ಯಾ. ಬಿದ್ದಂಡ ನಾಣಿ ದೇವಯ್ಯ, ಎಚ್.ಬಿ. ಗೋಪಾಲ್ ಅವರಿಂದ ಹಾಡು ಹಾಗೂ ಆಂಡಮಾಡ ಪವನ್ ಅಯ್ಯಪ್ಪ ಅವರಿಂದ ನಡೆದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.