ಕರುವಿನ ನೆರವಿಗೆ ಬಂದ ಸ್ಥಳೀಯರು ಮತ್ತು ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಂ ದಾವುದ್
ಕುಶಾಲನಗರ: ಕುಶಾಲನಗರದ ಜಿ.ಎಂ.ಪಿ. ಶಾಲೆಯ ಎದುರು ಸೋಮವಾರ ರಾತ್ರಿ ಅಪರಿಚಿತ ವಾಹನವೊಂದು ಕರುವಿಗೆ ಡಿಕ್ಕಿಯಾಗಿ ಜೀವನ್ಮರಣ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಬೆಳಗ್ಗೆ ಕರುವಿನ ಸ್ಥಿತಿಯನ್ನು ಗಮನಿಸಿದ ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಂ. ದಾವುದ್ ಅವರು ಕೆಲ ಸ್ಥಳೀಯರೊಂದಿಗೆ ಸೇರಿ ತಮ್ಮ ಸ್ನೇಹಿತರೊಬ್ಬರ ಜೀಪಿನಲ್ಲಿ ಕರುವನ್ನು ಪಶು ವೈದ್ಯ ಶಾಲೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.