ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮ ಕಲಶ ಉತ್ಸವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
- ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದ ಧಾರ್ಮಿಕ ಕಾರ್ಯಕ್ರಮ
ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮ ಕಲಶ ಉತ್ಸವಕ್ಕೆ ವಿಶೇಷ ಪ್ರಾರ್ಥನೆಯೊಂದಿಗೆ ಬುಧವಾರ ಚಾಲನೆ ನೀಡಲಾಯಿತು.
ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರದಿಂದ ಮೇ 18ರವರೆಗೆ ಜರುಗಲಿರುವ ಅಷ್ಟಬಂಧ ಬ್ರಹ್ಮಕಲಶ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ತಕ್ಕ ಮುಖ್ಯಸ್ಥರು ಹಾಗೂ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಅಂಕುರಾರ್ಪಣೆ, ವಾಸ್ತು ರಾಕ್ಷೋಗ್ನ ಹೋಮ, ವಾಸ್ತು ಬಲಿ ಜರುಗಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಹಾಗೂ ಸುಮನ್ ಸುಬ್ರಮಣಿ, ಭಕ್ತ ಜನ ಸಂಘದ ಕಾರ್ಯದರ್ಶಿ ಬಟ್ಟೀರ ಚೊಂದಮ್ಮ ಮೇದಪ್ಪ , ಖಜಾಂಜಿ ಅಂಜಪರವಂಡ ಕುಶಾಲಪ್ಪ, ಮಾಜಿ ಖಜಾಂಚಿ ನಬುಡುಮಂಡ ಸುಬ್ರಮಣಿ, ನಿರ್ದೇಶಕ ಪರದಂಡ ನರೇಂದ್ರ, ಪರದಂಡ ರಮೇಶ್, ಅನ್ನಡಿಯಂಡ ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಣಿಯರ ನಾಣಯ್ಯ, ಪಾರುಪತ್ತೆಗಾರ ಪರದಂಡ ಪ್ರಿನ್ಸ್, ಉದಿಯಂಡ ಸುಭಾಷ್, ಬಟ್ಟಿರ ಮೇದಪ್ಪ, ಕಾಂಡಂಡ ಉಷಾ ಜೋಯಪ್ಪ ಇತರರು ಇದ್ದರು.
ಗುರುವಾರ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆಗಳನ್ನು ನೆರವೇರಿಸಲಾಯಿತು.