ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ.
ನಾಪೋಕ್ಲು: ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮೇ 13 ರಿಂದ 18ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ13 ರಂದು ಸಾಮೂಹಿಕ ಪ್ರಾರ್ಥನೆ, ಪುಣ್ಯಹ ಅಂಕುರಾರ್ಪಣೆ, ವಾಸ್ತು ರಾಕ್ಷೋಘ್ನ ಹೋಮ ನೆರವೇರಲಿದೆ. ಮೇ 14ರಂದು ಗಣಪತಿ ಹೋಮ ಅಂಕುರ ಪೂಜೆ, ಬಿಂಬಶುದ್ಧಿ ಕಳಶ ಪೂಜೆ ಕಲಶಾಭಿಷೇಕ ಪ್ರಾಯಶ್ಚಿತ ಹೋಮಗಳು ನೆರವೇರಲಿವೆ. ರಾತ್ರಿ ಅಂಕುರ ಪೂಜೆ ಹಾಗೂ ದುರ್ಗಾ ನಮಸ್ಕಾರ ಪೂಜೆಗಳು ನೆರವೇರಲಿವೆ.
ಮೇ15ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ಅಂಕುರ ಪೂಜೆ, ಶಾಂತಿ ಹೋಮಗಳು, ಕಲಶಾಭಿಷೇಕ ನಡೆಯಲಿದ್ದು ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆಗಳು ನಡೆಯಲಿವೆ. ಮೇ 16ರಂದು ಬೆಳಗ್ಗೆ 7ಗಂಟೆಗೆ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವ ಕಲಶ, ಪೂಜೆ ತತ್ವ ಕಲಶಾಭಿಷೇಕ ನಡೆಯಲಿದೆ. ಮೇ 17ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಂಕುರ ಪೂಜೆ , ಕಲಶ ಪೂಜೆ, ಕುಂಭೇಶ ಕರ್ಕರಿ ಕಲಶ ಪೂಜೆ ಅಧಿವಾಸ ಹೋಮಗಳು ನಡೆಯಲಿವೆ.
ಮೇ 18ರಂದು ಬೆಳಗ್ಗೆ 8 ಗಂಟೆಗೆಯಿಂದ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಅಷ್ಟ ಬಂಧ ಲೇಪನ ಪರಿಕಲಶಾಭಿಷೇಕ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ ಮಂತ್ರಾಕ್ಷತೆ ನೆರವೇರಲಿದೆ ಎಂದು ಪಾಡಿ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.