ಕುಶಾಲನಗರದ ಝೇಂಕಾರ್ ಮ್ಯೂಸಿಕಲ್ ಇವೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ನಡೆದ ಜಾನಕಿಯಾನ ಮಧುರ ಗಾನ ಕಾರ್ಯಕ್ರಮದಲ್ಲಿ ಕಲಾವಿದರಾದ ರವಿ ಝೇಂಕಾರ್, ಶಾಂತಲಾ ರವಿ ಗಾಯನ ಗಮನ ಸೆಳೆಯಿತು. ರವಿ ಕೊಡಗು, ಅಭಿ, ದಿನೇಶ್ ಮಲ್ಲ, ಲಿಖಿತ್, ರಶ್ಮಿ, ಸ್ವಪ್ನ ಇದ್ದರು. 
ಕೊಡಗು

ಕಲೆಗಳು ಬದುಕಿನ ಅವಿಭಾಜ್ಯ ಅಂಗ

ಕುಶಾಲನಗರ:
ಕಲೆಗಳು ಬದುಕಿನ ಅಂಗವಾಗಿದ್ದು ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಅತ್ಯಂತ ಮೌಲ್ಯಯುತ ಕಾರ್ಯಕ್ರಮ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕುಶಾಲನಗರದ ಝೇಂಕಾರ್ ಮ್ಯೂಸಿಕಲ್ ಇವೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ಮಂಗಳವಾರ ಸಂಜೆ ನಡೆದ ಜಾನಕಿಯಾನ ಮಧುರ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರುನಾಡಿನ ನೆಲ, ಕಲೆ, ಸಂಸ್ಕೃತಿ ಭಾವನಾತ್ಮಕತೆಗೆ ಹೆಸರುವಾಸಿಯಾಗಿದ್ದು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಕಲಾವಿದೆ ಸಾಧಕಿ ಜಾನಕಮ್ಮ ಅವರ ನೆನಪು ಹಾಗೂ ನಮನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಕಾರ್ಯಕ್ರಮ ನೇತೃತ್ವ ವಹಿಸಿದ ಅಪರೂಪದ ಗಾಯಕ ರವಿ ಅವರ ಕಾರ್ತ ಶ್ಲಾಘನಾರ್ಹ ಎಂದರು.
ಕಾರ್ಯಕ್ರಮದ ಕುರಿತು ಹಾಗೂ ಜಾನಕಮ್ಮ ಅವರ ಸಂಕ್ಷಿಪ್ತ ಪರಿಚಯವನ್ನು ಮುಖ್ಯಸ್ಥ ರವಿ ನಡೆಸಿಕೊಟ್ಟರು. ಗಾಯಕರಾದ ರವಿ ಝೇಂಕಾರ್, ಶಾಂತಲಾ ರವಿ, ರವಿ ಕೊಡಗು, ಅಭಿ, ದಿನೇಶ್ ಮಲ್ಲ, ಲಿಖಿತ್, ರಶ್ಮಿ, ಸ್ವಪ್ನ ಮೂಲಕ ನಿರಂತರ ಐದು ಗಂಟೆಗಳ ಕಾಲ ಕಾರ್ಯಕ್ರಮ ಮೂಡಿ ಬಂದು ಗಾಯನಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಈ ಮೂಲಕ ಜಾನಕಮ್ಮನವರ ಸಿರಿ ಗಾಯನವನ್ನು ಮತ್ತೊಮ್ಮೆ ನೆನಪಿಸಿದಂತಾಯಿತು.
ಜೂನಿಯರ್ ರಾಜಕುಮಾರ್ ಎಂದೇ ಚಿರಪರಿಚಿತರಾಗಿರುವ ಮೈಸೂರಿನ ಬೈರಾಜ್ ಅವರ ಗಾಯನ ಖ್ಯಾತ ನಟ ರಾಜಕುಮಾರ್ ಅವರ ನೆನಪನ್ನು ಮರುಕಳಿಸಿತು. ಬಾಲ ಕಲಾವಿದರಾದ ಟಿ.ಕೆ. ಋತ್ವಿಕ್ ಮತ್ತು ಷಷ್ಠಿ ಷಾಡ್ಗುಣ್ಯ ಅವರುಗಳನ್ನು ಸೇರಿದಂತೆ ಕಲಾವಿದರನ್ನು ಗಣ್ಯರನ್ನು ಇವೆಂಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಾನಕಮ್ಮ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಲಾವಿದರಾದ ಮಂಜು ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ನಿರ್ದೇಶಕ ಮಹೇಶ್ ಕೋಟೆ, ಉದ್ಯಮಿಗಳಾದ ವಿಜಯನ್, ಮೈಸಿ ಕತ್ತನ್ನೀರ, ಪತ್ರಕರ್ತ ಎಂ.ಎನ್. ಚಂದ್ರಮೋಹನ್, ಆದಮ್, ಸುಮೇಶ್, ಅಜೀಜ್ ಕಿಶೋರ್, ಕಲಾವಿದ ಭರಮಣ್ಣ ಬೆಟಗೇರಿ ಇರ್ಫಾನ್ ಖಾನ್ ನೃತ್ಯ ಸಂಯೋಜಕ ಅಪ್ಸರ್ ಮತ್ತಿತರರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.