ಸಂಪಾಜೆ (ಚೆಕ್‌ಪೋಸ್ಟ್ ) ಗೇಟ್‌ನಲ್ಲಿ ವಲಯ ಅರಣ್ಯ ಅಧಿಕಾರಿಗಳ ತಂಡ ವಾಹನದಲ್ಲಿ ಬಿಟಿ ಮರದ ನಾಟಾಗಳನ್ನು ವಶಪಡಿಸಿಕೊಂಡಿರುವುದು.
ನಾಪೋಕ್ಲು: ಟಾಟಾ ಏಸ್ ವಾಹನದಲ್ಲಿ ಬಿಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳ ತಂಡ ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು, ಸಂಪಾಜೆ (ಚೆಕ್‌ಪೋಸ್ಟ್) ಗೇಟಿನಲ್ಲಿ ಬಿಟೆ ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ನಾಪೋಕ್ಲೂವಿನ ಬಿ.ಎಂ. ಸಜ್ಜನ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆ ಸಂದರ್ಭ ಟಾಟಾ ಏಸ್ ವಾಹನದಲ್ಲಿ ಬಿಟೆ ಮರಗಳ 25 ನಾಟಾ ಇದ್ದುದ್ದು ಕಂಡುಬಂದಿದೆ. ವಲಯ ಅರಣ್ಯಾಧಿಕಾರಿ ದಿನ್ಸಿದೇಚಮ್ಮ, ಉಪವಲಯ ಅರಣ್ಯಾಧಿಕಾರಿ ಸಂದೀಪ್‌ಗೌಡ, ಗಸ್ತು ಅರಣ್ಯ ಡಿ.ಪಾಲಕ ಕಾರ್ತಿಕ್, ನಾಗರಾಜ ನಾಟಕರ್ ಪಾಲ್ಗೊಂಡಿದ್ದರು.