ದುಬಾರೆಯಲ್ಲಿ ಇರುವ ಅಂಗನವಾಡಿ ಕೇಂದ್ರ
ಕಾವೇರಿ ನದಿ ಅಂಚಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ಹೊಂದಿಕೊAಡAತಿರುವ ದುಬಾರೆ ಗಿರಿಜನ ಹಾಡಿಯ ಅಂಗನವಾಡಿಗೆ ಕೊನೆಗೂ ಶಿಕ್ಷಕಿಯರ ನೇಮಕ ಆಗಿದೆ. ಇಲ್ಲಿಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ನಿವೃತ್ತಿ ಮತ್ತು ಸಹಾಯಕಿಯ ಅನಧಿಕೃತ ಗೈರು ಹಾಜರಿಯ ಕಾರಣದಿಂದ ಕಳೆದ 2 ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಹಾಗಾಗಿ ಈ ಹಾಡಿಯ ಮಕ್ಕಳು ಮೂಲ ಶಿಕ್ಷಣದಿಂದ ವಂಚಿತರಾಗುವAತೆ ಆಗಿತ್ತಲ್ಲದೆ, ಸರ್ಕಾರದ ಪೌಷ್ಠಿಕ ಆಹಾರವೂ ಸರಿಯಾಗಿ ತಲುಪುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರವಾಗಿ ಪಕ್ಕದ ಅಂಗನವಾಡಿಗಳಿAದ ಕಾರ್ಯಕರ್ತೆಯರನ್ನು ಈ ಕೇಂದ್ರಕ್ಕೆ ನಿಯೋಜನೆ ಮಾಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಆರ್. ಪ್ರಸನ್ನ ಕುಮಾರ್ ಮಂಗಳವಾರ (ಫೆ.17) ಆದೇಶ ಮಾಡಿದ್ದಾರೆ.
ದುಬಾರೆ ಗಿರಿಜನ ಹಾಡಿಯ ಅಂಗನವಾಡಿ ಕೇಂದ್ರಕ್ಕೆ ಬದಲಿ ವ್ಯವಸ್ಥೆ ಆಗುವ ತನಕ ಹೊಸಪಟ್ಟಣ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಎಂ.ಬಿ. ಜಮುನಾ ವಾರದಲ್ಲಿ ಸೋಮವಾರ ಮತ್ತು ಮಂಗಳವಾರ, ನಂಜರಾಯಪಟ್ಟಣ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಬಿ. ಭವ್ಯಾ ಬುಧವಾರ ಮತ್ತು ಗುರುವಾರ, ಹಾಗೂ ಬಾಳೆಗುಂಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜೆ.ಎಂ. ರೇಷ್ಮಾ ಶುಕ್ರವಾರ ಮತ್ತು ಶನಿವಾರ ಇಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಆರ್. ಪ್ರಸನ್ನ ಕುಮಾರ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ದುಬಾರೆ ಗಿರಿಜನ ಹಾಡಿಯಲ್ಲಿ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೆಲವು ಮನೆಗಳಿಗೆ ಮಾತ್ರ ಸಂಪರ್ಕ ಸಾಧ್ಯವಾಗಿಲ್ಲ. ಇಂಥ ಮನೆಗಳಲ್ಲಿ ಇವರಿಗೆ ಕೆಲವೊಂದು ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದ್ದು, ದಾಖಲೆಗಳು ಸಿಕ್ಕಿದ ಕೂಡಲೇ ಈ ಮನೆಗಳಿಗೂ ಸಂಪರ್ಕ ಕೊಡಲಾಗುತ್ತದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ದುಬಾರೆ ಗಿರಿಜನ ಹಾಡಿಯ ಸಮಸ್ಯೆಗಳ ಬಗ್ಗೆ ವಿಜಯವಾಣಿಯಲ್ಲಿ ಬುಧವಾರ ವಿಶೇಷ ವರದಿ ಪ್ರಕಟ ಆಗಿತ್ತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್‌ಕ್ಲಬ್ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ದುಬಾರೆ ಹಾಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತರ ನಡೆ ಹಾಡಿ ಕಡೆ ಕಾರ್ಯಕ್ರಮದಲ್ಲೂ ಈ ಸಮಸ್ಯೆಗಳು ಪ್ರತಿಧ್ವನಿಸಿದ್ದವು.