ಪಾಲಿಬೆಟ್ಟದ ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಯು.ರಾಧಾಕೃಷ್ಣ ಮತ್ತು ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಟಿ.ವೈ.ಮುರಳಿ, ಸುಶಾ ಮೋಹನ್, ಮನೋಜ್ ಬಂಡೆ ಇತರರಿದ್ದರು. 
ಕೊಡಗು

ಕೊಡಗು ಹಿಂದೂ ಮಲಯಾಳಿ ಸಮಾಜಕ್ಕೆ ಪದಾಧಿಕಾರಿಗಳ ನೇಮಕ

ಗೋಣಿಕೊಪ್ಪ: ಕೊಡಗು ಹಿಂದೂ ಮಲಯಾಳಿ ಸಮಾಜದ ಪಾಲಿಬೆಟ್ಟ ಶಾಖೆಯ ಅಧ್ಯಕ್ಷರಾಗಿ ಟಿ.ವೈ.ಮುರಳಿ ಆಯ್ಕೆಯಾದರು.
ಪಾಲಿಬೆಟ್ಟದ ಖಾಸಗಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಬಂಡೆ, ಖಜಾಂಚಿ ಮಧುಸೂದನ್, ಗೌರವಾಧ್ಯಕ್ಷ ರಿನೀಶ್ ವಿ.ಬಿ.ಉಪಾಧ್ಯಕ್ಷರಾಗಿ ಸಾಯುಜ್, ಮಂಜುಳಾ, ಕಾರ್ಯದರ್ಶಿ ಅನಿಲ್ ಕುಮಾರ್, ನಿದೇಶಕರಾಗಿ ಎಂ.ಎಸ್.ಶಶಿ, ಪ್ರಿಯಾ ಚಂದ್ರನ್, ಶೀಲಾ ಅನಿಲ್, ಸುರೇಂದ್ರ, ಎಂ.ಎ.ಅಖಿಲ್, ಪಿ.ಕೆ.ಗಂಗಾಧರ್, ನಳಿನಿ ದುರ್ಗಾ, ವಿ.ಪಿ.ಅಭಿನಂದನ್ ಆಯ್ಕೆಯಾದರು.
ನೂತನ ಅಧ್ಯಕ್ಷ ಟಿ.ವೈ.ಮುರುಳಿ ಮಾತನಾಡಿ, ಎಲ್ಲ ಸದಸ್ಯರು ಒಗ್ಗೂಡಿ ಸಮಾಜಮುಖಿ ಕೆಲಸವನ್ನು ಮಾಡಬೇಕಾಗಿದೆ. ಸಮಾಜದ ಸದಸ್ಯರ ಕುಟುಂಬಗಳಿಗೆ ತೊಂದರೆಯಾದಲ್ಲಿ ತಕ್ಷಣವೇ ಸ್ಪಂದಿಸುವುದು ನಮ್ಮ ಗುರಿ. ಎಲ್ಲರೂ ನನ್ನ ಅವಧಿಯಲ್ಲಿ ಸಹಕಾರ ನೀಡಬೇಕೆಂದು ಕೋರಿದರು.
ಸುಶಾ ಮೋಹನ್ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಕಂದಾಯ ನಿರೀಕ್ಷಕ ಸಿ.ಯು.ರಾಧಾಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಸಲಾಯಿತು. ಸಮಾಜದ ಸ್ಥಾಪಕ ಅಧ್ಯಕ್ಷ ಶರತ್ ಕಾಂತ್, ಖಜಂಚಿ ಶಾಜಿ ಅಚ್ಯುತ್ತನ್, ಉಪಾಧ್ಯಕ್ಷ ಪುಷ್ಪಾ ಮನೋಜ್, ವಿ.ಬಿ.ರಿನೀಶ್ ಇದ್ದರು.