ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಸಂತೋಷ್, ನಾಗರಾಜ್, ಜಗದೀಶ್ ಇತರರಿದ್ದರು. 
ಕೊಡಗು

ಕನ್ನಡ ಧ್ವಜಸ್ತಂಭಕ್ಕೆ ಸುಣ್ಣ-ಬಣ್ಣ ಬಳಿಯಿರಿ

ರವಿಕುಮಾರ್ ಪಿ. ಕೆ
ಸೋಮವಾರಪೇಟೆ: ಪಟ್ಟಣದ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿನ ಒನಕೆ ಓಬವ್ವ ವೃತ್ತದ ಕನ್ನಡ ಧ್ವಜಸ್ತಂಬಕ್ಕೆ ಸುಣ್ಣ ಬಣ್ಣ ಬಳಿದು ನಿರ್ವಹಣೆ ಮಾಡುವಂತೆ ಬುಧವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣದ ತಾಲೂಕು ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸ್ತಂಭಕ್ಕೆ ಸಂತೆ ದಿನ ಸೇರಿದಂತೆ ದಿನಂಪ್ರತಿ ಅಪಮಾನ ಮಾಡಲಾಗುತ್ತಿದೆ. ವ್ಯಾಪಾರಿಗಳು ಇದಕ್ಕೆ ಹಗ್ಗ ಕಟ್ಟಿ ಬಳಸಿಕೊಳ್ಳುವುದು, ಕಬ್ಬಿನ ಅಂಗಡಿಯವರು ಇದೇ ಸ್ತಂಭಕ್ಕೆ ತಮ್ಮ ಗಾಡಿಯನ್ನು ಒರಗಿಸಿ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಪಟ್ಟಣ ಪಂಚಾಯಿತಿ ಈ ಸ್ತಂಭವನ್ನು ದುರಸ್ತಿ ಪಡಿಸಿ ಸುಣ್ಣ ಬಣ್ಣ ಬಳಿದು ಸ್ವಚ್ಛ ಮಾಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯಿತಿ ಎದುರು ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ಎಚ್ಚರಿಸಿದರು.
ವೇದಿಕೆ ತಾಲೂಕು ಘಟಕದ ಉಸ್ತುವಾರಿ ಎಚ್.ಎ.ನಾಗರಾಜು, ಪ್ರಧಾನ ಕಾರ್ಯದರ್ಶಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಪ್ರವೀಣ್, ಸಾಮಾಜಿಕ ಜಾಲತಾಣದ ಬೋಪಯ್ಯ ಮತ್ತು ಜಾನ್‌ಸನ್ ಇದ್ದರು.