ಗೊಂದಿಬಸವನಹಳ್ಳಿ ಗ್ರಾಮದ ಮೈನ್ ಕೋರೆಯಲ್ಲಿರುವ ಶ್ರೀ ಮಾರಿಯಮ್ಮ ದೇವರ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು. ನಾಗರಾಜು, ಗಣೇಶ, ಮಣಿ, ಸುಧಾಕರ ಮತ್ತಿತರರು ಇದ್ದರು.
ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಮೈನ್ ಕೋರೆಯಲ್ಲಿರುವ ಶ್ರೀ ಮಾರಿಯಮ್ಮ ದೇವರ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು. ಮೂರು ದಿನಗಳ ಕಾಲ ನಡೆದ ಧಾರ್ಮಿಕ ಪೂಜೋತ್ಸವದಲ್ಲಿ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಮಾರಿಯಮ್ಮನ ಕೃಪೆಗೆ ಪಾತ್ರರಾದರು.
ಗ್ರಾಮದ ಮಹಿಳಾ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಅಮ್ಮನವರಿಗೆ ಇಷ್ಟವೆನ್ನಲಾದ ತಂಬಿಟ್ಟು ಉಂಡೆಗಳನ್ನು ಭಕ್ತಿಯಿಂದ ಮೆರವಣಿಗೆಯಲ್ಲಿ ತಂದು ದೇವರಿಗೆ ನೈವೇದ್ಯ ಮಾಡಿ ಪುನೀತರಾದರು.
ಪೂಜೋತ್ಸವದ ಅಂಗವಾಗಿ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಗರ್ಭ ಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವರ ಮೂರ್ತಿಯನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಗಣೇಶ, ಖಜಾಂಚಿ ಮಣಿ, ಪ್ರಮುಖರಾದ ಸುಧಾಕರ, ಸಂತೋಷ, ಎಂ. ಚಂದ್ರು, ನವೀನ, ರಾಜೇಂದ್ರ, ರವಿ ಮೊದಲಾದವರಿದ್ದರು. ಅರ್ಚಕ ಮುತ್ತುಸ್ವಾಮಿ ಧಾರ್ಮಿಕ ವಿಧಿ ನಡೆಸಿದರು.