ಕೂಡುಮಂಗಳೂರು ಗ್ರಾಮದಲ್ಲಿರುವ ಚೌಡಮ್ಮ ತಾಯಿಯ ವಾರ್ಷಿಕ ಮಹಾ ಪೂಜೋತ್ಸವದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. 
ಕೊಡಗು

ಚೌಡಮ್ಮ ತಾಯಿ ವಾರ್ಷಿಕ ಪೂಜೋತ್ಸವ

ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದಲ್ಲಿರುವ ಚೌಡಮ್ಮ ತಾಯಿಯ ವಾರ್ಷಿಕ ಮಹಾ ಪೂಜೋತ್ಸವ ಶ್ರದ್ಧಾಭಕ್ತಿ, ವಿವಿಧ ಹೋಮ ಹವನಗಳ ಮೂಲಕ ಮಂಗಳವಾರ ನೆರವೇರಿತು. ಇದೇ ಸಂದರ್ಭ ಕೂಡಿಗೆ, ಕೂಡುಮಂಗಳೂರು ಗ್ರಾಮಸ್ಥರಿಗೆ, ಅಗಮಿಸಿದ್ದ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂರ್ತಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಕೆ. ಸಿ. ವೆಂಕಟೇಶ್, ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಹರಿ, ಖಜಾಂಚಿ ಕಾಂತಾರಾಜ್, ಸಮಿತಿ ನಿರ್ದೇಶಕರು, ಗೌರವ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.