ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವರನ್ನು ವಿಶೇಷವಾಗಿ ಅಲಂಕರಿಸಿರುವುದು.
- ಕೋಟೆಕೊಪ್ಪ ಗ್ರಾಮ
- ಶ್ರೀ ಬೈತೂರೇಶ್ವರ ದೇವಾಲಯ ಬನ
ವಿರಾಜಪೇಟೆ: ಸಮೀಪದ ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವಾಲಯ ಬನದಲ್ಲಿ ಇತ್ತೀಚೆಗೆ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆಯಿತು.
ವಿವಿಧ ಪೂಜೆ ವಿಧಾನಗಳೊಂದಿಗೆ ಬನದ ಬೈತೂರೇಶ್ವರ ದೇವರಿಗೆ ಮಹಾಪೂಜೆ ಹಾಗೂ ಇತರ ಪೂಜೆಗಳು ನೆರವೇರಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಇದ್ದರು.