- ಚೆಟ್ಟಳ್ಳಿ ಪೊಲೀಸ್ ಉಪಠಾಣೆಯಲ್ಲಿ ದೂರು
ಸಿದ್ದಾಪುರ: ಚೆಟ್ಟಳ್ಳಿಯ ಬಟ್ಟರ ಕುಟುಂಬಕ್ಕೆ ಸಂಬಂಧಿಸಿದ ಪುರಾತನ ನಾಗನ ನೆಲೆಯಲ್ಲಿದ್ದ ಕಲ್ಲಿನ ನಾಗನ ವಿಗ್ರಹವನ್ನು ಬುಧವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ಗುರುವಾರ ಕುಟುಂಬದವರು ನಾಗನ ನೆಲೆಗೆ ತೆರಳಿದ ವೇಳೆ ವಿಗ್ರಹ ಕಾಣೆಯಾಗಿರುವುದು ತಿಳಿದು ಬಂದಿದೆ. ವಿಗ್ರಹವನ್ನು ಪತ್ತೆ ಹಚ್ಚುವಂತೆ ಬಟ್ಟರ ಕುಟುಂಬಸ್ಥರು ಚೆಟ್ಟಳ್ಳಿ ಪೊಲೀಸ್ ಉಪಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.