ಆದಿ ಮುತ್ತಪ್ಪನ್ ದೇವಾಲಯದ ವಾರ್ಷಿಕ ತೆರೆಯಲ್ಲಿ ನೆರೆದ ಭಕ್ತರಿಗೆ ಆಶೀರ್ವದಿಸುತ್ತಿರುವ ದೈವ. 
ಕೊಡಗು

ವಾರ್ಷಿಕ ತೆರೆ ಮಹೋತ್ಸವ - ಸಾವಿರಾರು ಭಕ್ತರು

ಎ. ಆರ್. ರಘುರಾಮ
ವಿರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನೆಲೆನಿಂತ ಆದಿ ಮುತ್ತಪ್ಪನ್ ದೇವಾಲಯ ದ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು.
ವಿರಾಜಪೇಟೆ ತಾಲ್ಲೂಕಿನ ಕದನೂರು ಶ್ರೀ ಶ್ರೀ ಮಠಪುರ ಆದಿ ಮುತ್ತಪ್ಪನ್ ದೇವಾಲಯದ ವಾರ್ಷಿಕ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿದ್ದು. ಬೆಳಗ್ಗೆ 6 ಗಂಟೆ ಗಣಪತಿ ಹೋಮದೊಂದಿಗೆ ಆರಂಭವಾಗಿ ನಂತರ ಧ್ವಜಾರೋಹಣ ಕಾರ್ಯ ನಡೆಯಿತು. 10 ಗಂಟೆಗೆ ಪೈಂಗುತ್ತಿ (ಪ್ರಸಾದ) ಸಂಜೆ 6-30ಕ್ಕೆ ಮುತ್ತಪ್ಪನ್ ವೆಳ್ಳಾಟಂ ನಡೆಯಿತು. 7-30ಕ್ಕೆ ಗುಳಿಗನ್ ವೆಳ್ಳಾಟಂ ನಡೆದು ದೈವಗಳ ವಿವಿಧ ನರ್ತನ ಸೇವೆ ,ಹರಕೆ ಒಪ್ಪಿಸುವುದು, ಉತ್ಸವ ಸಮಿತಿ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಉತ್ಸವ ಸಮಿತಿಯ ಸದಸ್ಯರಾದ ಬಿ.ಉನ್ನಿ ಅವರು ಜಿಲ್ಲೆಯ 600 ವರ್ಷಗಳ ಇತಿಹಾಸ ಉಳ್ಳ ಮುತ್ತಪ್ಪ ದೇವಾಲಯ ಇದಾಗಿದೆ‌. ಉತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿ ಪಡೆದುಕೊಳ್ಳುತಿದ್ದಾರೆ. ದೇವಾಲಯ ಪುನರ್ ನಿರ್ಮಾಣಗೊಂಡು ಇದೀಗ ದೈವಸಂಕಲ್ಪದಂತೆ ಕಂಗೊಳಿಸುತ್ತಿದೆ.ವಿಜ್ರಂಬಣೆಯ ಉತ್ಸವದಲ್ಲಿ ಭಾಗಿಯಾಗುವುದೇ ನಮ್ಮ ಪುಣ್ಯ ಎಂದು ಹೇಳಿದರು.
ಉದ್ಯಮಿ ವಿಶ್ವನಾಥ್ ಅವರು ಮಾತನಾಡಿ. ಕೊಡಗಿನಲ್ಲಿ ಪ್ರಪ್ರಥಮ ವಾಗಿ ನೆಲೆಯಾಗಿರುವ ಮುತ್ತಪ್ಪನ್ ದೇವಾಲಯ ಇದಾಗಿದ್ದು. ವರ್ಷದಿಂದ ವರ್ಷಕ್ಕೆ ಭಕ್ತರು ಅಧಿಕವಾಗುತ್ತಿದ್ದಾರೆ. ಇಲ್ಲಿ ಮೊದಲು ತೆರೆ ಮಹೋತ್ಸವ ಆಚರಿಸಲಾಗುತ್ತದೆ. ನಂತರ ಇತರ ಸ್ಥಳಗಳಲ್ಲಿ ಉತ್ಸವಗಳು ನಡೆಸಲಾಗುತ್ತದೆ ಎಂಬ ಪ್ರತೀತಿ ಇದೆ. ಸರ್ವ ಭಕ್ತಾದಿಗಳಿಗೂ ಶ್ರೀ ಮುತ್ತಪ್ಪನ್ ದೇವರು ಒಳಿತು ಮಾಡಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಮಠಪುರ ಆದಿ ಮುತ್ತಪ್ಪನ್ ದೇವಾಲಯ ದ ಮುಖ್ಯಸ್ಥ ರಾದ ಜಯೇಶ್, ರಮೇಶ್ ,ಉತ್ಸವ ಸಮಿತಿಯ ಸದಸ್ಯರು. ಕದನೂರು ಗ್ರಾಮಸ್ಥರ ಸೇರಿದಂತೆ ಸಾವಿರಾರು ಭಕ್ತರು ತೆರೆ ಮಹೋತ್ಸವ ದಲ್ಲಿ ಭಾಗವಹಿಸಿ ಶ್ರೀ ಮುತ್ತಪ್ಪನ್ ದೇವರುಗಳ ಆಶೀರ್ವಾದ ಪಡೆದು ಪುನಿತರಾದರು.