ಮೃತ ಪ್ರಗತ್ ಅಯ್ಯಪ್ಪ  
ಕೊಡಗು

ಬೈಕ್ ಚಾಲಕ ಮೃತ , ಹಿಂಬದಿ ಸವಾರ ಗಂಭೀರ

ಎ. ಆರ್. ರಘುರಾಮ
ವಿರಾಜಪೇಟೆ : ಮಳೆಯನ್ನು ಲೆಕ್ಕಿಸದೆ ಬೈಕ್ ನಲ್ಲಿ ತೆರಳುತಿದ್ದ ಇರ್ವರು ರಸ್ತೆ ಅಪಘಾತಕ್ಕೆ ಒಳಗಾಗಿ ಬೈಕ್ ಚಾಲಕ ಮೃತನಾದ ಘಟಣೆ ವಿರಾಜಪೇಟೆ ಅಮ್ಮತ್ತಿ ಮುಖ್ಯ ರಸ್ತೆಯಲ್ಲಿ ಭಾನುವಾರ ನಡೆದಿದೆ.
ವಿರಾಜಪೇಟೆ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರ್ಣಾಣೆ ಗ್ರಾಮದ ನಿವಾಸಿ ಹೆಚ್.ವಾಸು ಎಂಬುವವರ ಪುತ್ರ ಹೆಚ್.ವಿ. ಪ್ರಗತ್ ಅಯ್ಯಪ್ಪ ಪ್ರಾಯ ೩೫ ವರ್ಷ ಕೂಲಿ ಕಾರ್ಮಿಕ ಮೃತನಾದ ವ್ಯಕ್ತಿ ಮನೆಯ ಸನಿಹದ ನಿವಾಸಿ ಚೆಂಗಪ್ಪ ಪ್ರಾಯ ೫೩ ವರ್ಷ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾದ ವ್ಯಕ್ತಿ.
ಮೃತ ವ್ಯಕ್ತಿ ಬಿಳುಗುಂದ ಗ್ರಾಮದಿಂದ ನೆರೆಯ ವ್ಯಕ್ತಿ ಚೆಂಗಪ್ಪ ಅವರೊಂದಿಗೆ ತನ್ನ ದ್ವಿಚಕ್ರವಾಹನದಲ್ಲಿ ಅಮ್ಮತ್ತಿಗೆ ತೆರಳತಿದ್ದರು. ಸಿದ್ದಾಪುರದಿಂದ ತಮ್ಮ ವ್ಯಾಪಾರ ಮುಗಿಸಿ ವಿರಾಜಪೇಟೆ ಗೆ ಆಗಮಿಸುತಿದ್ದ ಮಾರೂತಿ ಒಮ್ನಿ ರಾತ್ರಿ ಸುಮಾರು ೮-೩೦ ರ ವೇಳೆಗೆ ಅಮ್ಮತ್ತಿ ರೀಕ್ರಿಯೆಷನ್ ಕ್ಲಬ್ ಮುಂಭಾಗದಲ್ಲಿ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಚಾಲಕ ಪ್ರಗತ್ ಗೆ ತಲೆ ಭಾಗ ಮತ್ತು ಎದೆ ಭಾಗಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಹಿಂಬದಿ ಸವಾರ ಚೆಂಗಪ್ಪ ಅವರಿಗೆ ಬಲ ಕಾಲು ಭಾಗಗಕ್ಕೆ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಅಸ್ಪತ್ರಗೆ ದಾಖಲಿಸಿದ್ದಾರೆ. ವೈದ್ಯರ ಆದೇಶದ ಮೇರೆಗೆ ಗಾಯಳುಗಳನ್ನು ಮಂಗಳೂರು ಗೆ ರವಾನಿಸಲು ತಿಳಿಸಿದ್ದಾರೆ. ಮಂಗಳೂರು ಮಾರ್ಗದ ಮಧ್ಯೆ ಗಾಯಿಳು ಪ್ರಗತ್ ಮರಣಹೊಂದಿದ್ದಾರೆ. ಇನ್ನೋರ್ವ ಗಾಯಳು ಚೆಂಗಪ್ಪ ಅವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದರೆ. ಮೃತ ಪ್ರಗತ್ ವಿವಾಹವಾಗಿದ್ದು ಪತ್ನಿ ಕಾವ್ಯ ಹಾಗೂ ಒಂದುವರೆ ವರ್ಷದ ಮಗುವನ್ನು ಅಗಲಿದ್ದಾನೆ. ಮೃತನ ಅಣ್ಣ ಪುನಿತ್ ನೀಡಿರುವ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕನ ಮೇಲೆ ಅಪಘಾತ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.