ವಿರಾಜಪೇಟೆ ಕಾವೇರಿ ಕಾಲೇಜು ಮತ್ತು ಒತ್ತೋರ್ಮೆರ ಕೊಡವ ಕೂಟದ ಸಹಯೋಗದಲ್ಲಿ ಆರಂಭಿಸಲಾದ ಆಟ್ - ಪಾಟ್ ಪದ್ಧತಿ ಪಡಿಪು ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು. ಡಾ. ಕುಪ್ಪಂಡ ಜಿ. ವೀಣಾ, ಕಾಳಮಂಡ ರಾಬಿನ್, ಕಾಳೆಂಗಡ ದಮಯಂತಿ ಮತ್ತಿತರರು ಇದ್ದರು.
ವಿರಾಜಪೇಟೆ ಕಾವೇರಿ ಕಾಲೇಜು ಮತ್ತು ಒತ್ತೋರ್ಮೆರ ಕೊಡವ ಕೂಟದ ಸಹಯೋಗದಲ್ಲಿ ಆಟ್ - ಪಾಟ್ ಪದ್ಧತಿ ಪಡಿಪು ಶಿಬಿರವನ್ನು ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಪ್ರಾರಂಭಿಸಲಾಯಿತು. ಕೊಡವರ ಪ್ರಮುಖ ನೃತ್ಯಗಳಾದ ಕೋಲಾಟ್, ಕತ್ತಿಯಾಟ್, ಬೋಲ್ಕಾಟ್, ಉಮ್ಮಾತಾಟ್ ಮತ್ತು ಕೊಡವ ಪದ್ಧತಿಯ ಬಗ್ಗೆ ತರಬೇತಿಯನ್ನ ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಮುಂದಾಳುತ್ತದಲ್ಲಿ ಕೂಟದ ಸದಸ್ಯರು ನೀಡಲಿದ್ದಾರೆ.
ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾದ ಡಾ. ಕುಪ್ಪಂಡ ಜಿ. ವೀಣಾ, ವಿದ್ಯಾರ್ಥಿಗಳಿಗೆ ಸಂಸ್ಕೃತಿ ಆಚಾರಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ತರಬೇತಿಯಲ್ಲಿ ಅದನ್ನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕೂಟದ ಉಪಾಧ್ಯಕ್ಷೆ ಮಾತಾಂಡ ಖುಷಿ ಉನ್ನತಿ ಮಾತನಾಡಿ, ಉಮ್ಮತ್ತ್ ಆಟ್ ಕೊಡವರ ನೃತ್ಯಗಳಲ್ಲಿ ಒಂದಾಗಿದೆ. ಇದನ್ನು ಕಲಿತು ಇನ್ನೊಬ್ಬರಿಗೆ ಕಲಿಸಿ ಮುಂದಿನ ಪೀಳಿಗೆಗೆ ಉಳಿಸಬೇಕೆಂದರು.
ಒತ್ತೋರ್ಮೆರ ಕೊಡವ ಕೂಟದ ಖಜಾಂಚಿ ಕಾಳಮಂಡ ರಾಬಿನ್ ಮಾತನಾಡಿ, ಯಾವುದೇ ಜನಾಂಗದ ಸಂಸ್ಕೃತಿ ಪದ್ಧತಿ, ಆಚಾರ ವಿಚಾರವನ್ನು ತಿಳಿದು ಕೊಂಡು ಆಚರಿಸುವುದು ಉತ್ತಮ ಎಂದು ಹೇಳಿ ಕೊಡವರ ಉಡುಪು ವೈತ್ರ (ಚೆಕ್‌ವಸ್ತ್ರ) ಕಟ್ಟುವ ಕ್ರಮವನ್ನು ಹಾಗೂ ಅದಕ್ಕೆ ಸಂಬAಧಿಸಿದAತೆ ಮಾಹಿತಿಯನ್ನು ಸವಿವರವಾಗಿ ತಿಳಿಸಿಕೊಟ್ಟರು.
ಒತ್ತೋರ್ಮೆರ ಕೊಡವ ಕೂಟದ ಕಾರ್ಯದರ್ಶಿ ಮಾಚಂಗಡ ಸಚಿನ್ ತಿಮ್ಮಯ್ಯ, ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲಚಂಡ ಪಿ. ಬೋಪಣ್ಣ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಕಾಳೆಂಗಡ ದಮಯಂತಿ, ಒತ್ತೋರ್ಮೆರ ಕೊಡವ ಕೂಟದ ಸಹ ಕಾರ್ಯದರ್ಶಿ ಅಳ್ಳಂಡ ಸಹನ ಚೋಂದಮ್ಮ, ನಿರ್ದೇಶಕರಾದ ಮಾಚಂಗಡ ಭೂಮಿಕಾ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ಪದವಿ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ಅಮ್ಮಂಡ ಅನುಪಮ ತಿಮ್ಮಯ್ಯ, ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ಆಲೆಮಾಡ ಗಾಯತ್ರಿ ತಿಮ್ಮಯ್ಯ ಹಾಗೂ ಶಿಬಿರಾರ್ಥಿ ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.