ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಮೊನ್ನಂಡ ಶೋಭಾ ಸುಬ್ಬಯ್ಯ, ಕಾಣತಂಡ ಶೀಲಾ, ತಾತಂಡ ಜ್ಯೋತಿ ಪ್ರಕಾಶ್, ಉದ್ದಪಂಡ ವಿಮಲಾ, ಮುರುವಂಡ ಉಷಾ ನೀಲಕಂಠ, ಕಂಬಿರಂಡ ರೇಷ್ಮಾ ಇತರರಿದ್ದರು. 
ಕೊಡಗು

ಲಾಭಕ್ಕಾಗಿ ಆಸೆ ಪಡದಿರುವ ಜೀವ ಹೆಣ್ಣು

ಪ್ರಮುಖ ಮುಖ್ಯಾಂಶಗಳು

  • ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟ
  • ಬರಹಗಾರ್ತಿ ಮೊನ್ನಂಡ ಶೋಭಾ ಸುಬ್ಬಯ್ಯ
ವಿರಾಜಪೇಟೆ: ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟ ವತಿಯಿಂದ ಇತ್ತೀಚೆಗೆ ಕೊಡವ ಸಮಾಜದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬರಹಗಾರ್ತಿ ಮೊನ್ನಂಡ ಶೋಭಾ ಸುಬ್ಬಯ್ಯ, ಹೃದಯದ ಒಳಗೆ ಪ್ರೀತಿ ಇಟ್ಟು ಮುನ್ನಡೆಸುವವಳು ಹೆಣ್ಣು. ಯಾವ ಲಾಭಕ್ಕೂ ಆಕೆ ಆಸೆ ಪಡದೆ ತನ್ನ ಜೀವನವನ್ನು ಸಂಸಾರಕ್ಕಾಗಿ ಮುಡಿಪಾಗಿಡುತ್ತಾಳೆ. ಗಂಡು-ಹೆಣ್ಣು ಎಂಬ ಭೇದ ಮಾಡದೆ ಎಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಮಹಿಳೆಯರು ಬುದ್ಧಿವಂತರು ಹಾಗೂ ಜ್ಞಾನವಂತರೂ ಆಗಿರುತ್ತಾರೆ. ಮಹಿಳೆಯರು ಮನೆಯಿಂದ ಹೊರಗೆ ಬಂದು ತಮ್ಮ ಜ್ಞಾನವನ್ನು ಪ್ರದರ್ಶಿಸಬೇಕು ಎಂದರು.
ದಿನದ ಮಹತ್ವ ಕುರಿತು ಕಾಣತಂಡ ಶೀಲಾ ಮಾತನಾಡಿದರು. ಒಕ್ಕೂಟದ ಚುಮ್ಮಕ್ಕ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾ ಹಾಗೂ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಕ್ಕೂಟದ ಬ್ಯಾನರ್ ಹಾಗೂ ದೀಪವನ್ನು ಪೊನ್ನಕ್ಕ ತಂಡದವರಿಗೆ ಮುಂದಿನ ಕಾರ್ಯಕ್ರಮವನ್ನು ನಡೆಸಲು ಹಸ್ತಾಂತರಿಸಲಾಯಿತು. ಉದ್ದಪಂಡ ವಿಮಲಾ, ಮುರುವಂಡ ಉಷಾ ನೀಲಕಂಠ, ಕಂಬಿರಂಡ ರೇಷ್ಮಾ ಉಪಸ್ಥಿತರಿದ್ದರು . ಕಾರ್ಯಕ್ರಮದ ಬಳಿಕ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.