ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಏರ್ಪಡಿಸಿದ್ದ ಕಲಾನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿದರು. ಸಬಲಂ ಭೋಜಣ್ಣ ರೆಡ್ಡಿ, ಬಿ.ಸಿ. ಶಂಕರಯ್ಯ, ಕೃಷ್ಣಮೂರ್ತಿ, ಕೆ.ಕೆ. ನಾಗರಾಜ್ ಶೆಟ್ಟಿ ಮತ್ತಿತರರು ಇದ್ದರು. 
ಕೊಡಗು

ಸಂಗೀತ ಮತ್ತು ಸಾಹಿತ್ಯದ ಸುಮಧುರ ಸಂಗಮ

ಕುಶಾಲನಗರ:
ಸಂಗೀತ ಮತ್ತು ಸಾಹಿತ್ಯದ ಸುಮಧುರ ಸಂಗಮ ಕಲಾಸಕ್ತರಿಗೆ ಬೇರೆಯದ್ದೇ ಆದ ಲೋಕ ಸೃಷ್ಟಿಸಿಕೊಡುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಸಬಲಂ ಭೋಜಣ್ಣ ರೆಡ್ಡಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿಕೇರಿ ವಿಭಾಗ ಉಪ ಅರಣ್ಯಸಂರಕ್ಷಣಾಧಿಕಾರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕಾವೇರಿ ನಿಸರ್ಗಧಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕಲಾನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿಯ ಮಡಿಲಿನಲ್ಲಿ ಸಂಗೀತ ಮತ್ತು ಸಾಹಿತ್ಯದ ಸುಮಧುರ ಸಂಗಮವಾಗಿ ಮೂಡಿಬರುವ ಕಾರ್ಯಕ್ರಮಗಳಲ್ಲಿ ಗಾಯಕರ ಮಧುರ ಕಂಠದಿAದ ಹೊರಹೊಮ್ಮುವ ಗೀತೆಗಳು ವಿವಿಧ ಪಕ್ಕವಾದ್ಯಗಳ ನಾದದೊಂದಿಗೆ ಬೆರೆತು ಅಪೂರ್ವ ಸಂಗೀತಲೋಕವನ್ನು ಸೃಷ್ಟಿಸುತ್ತವೆ. ಆ ನಾದಲಹರಿ ಇಲ್ಲಿನ ಪ್ರಾಣಿ-ಪಕ್ಷಿಗಳು, ಕೀಟ-ಪತಂಗಗಳು ಹಾಗೂ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಆಗಮಿಸುವ ಪ್ರವಾಸಿಗರ ಮನಸ್ಸು ಮತ್ತು ಹೃದಯಗಳನ್ನು ಉಲ್ಲಾಸಗೊಳಿಸುತ್ತವೆ. ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲೆ, ಸಂಸ್ಕೃತಿ ಮತ್ತು ಪ್ರಕೃತಿಯ ನಡುವೆ ಸುಂದರ ಸೇತುವೆಯಾಗಿ ರೂಪುಗೊಂಡು, ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿ ನೆನಪುಗಳನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ವಿದ್ವಾನ್ ಬಿ.ಸಿ. ಶಂಕರಯ್ಯ ಮಾತನಾಡಿ, ಪ್ರಕೃತಿಯ ಮಧ್ಯದಲ್ಲಿ ಸರಳವಾದ ವ್ಯವಸ್ಥೆಯಲ್ಲಿ ಪಕ್ಕ ವಾದ್ಯಗಳ ಸಂಗಮದಲ್ಲಿ ಸ್ಥಳೀಯ ಕಲಾವಿದರು ಕೋಗಿಲೆಗಳನ್ನು ನಾಚಿಸುವ ರೀತಿಯಲ್ಲಿ ಅನುರಣನಗೊಳಿಸಿದ ಹಾಡುಗಳು ಬಹುಕಾಲದವರೆಗೆ ಸಂಗೀತಾಸಕ್ತರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಶಾಲನಗರ ತಾಲೂಕು ಹೆಚ್ಚುವರಿ ತಹಸೀಲ್ದಾರ್ ಕೃಷ್ಣಮೂರ್ತಿ, ಸ್ಥಳೀಯ ಕಲಾವಿದರಾದ ಸತೀಶ್, ಶರ್ಮಿಳಾ ರಮೇಶ್, ಲಕ್ಷಿö್ಮÃ ಹರೀಶ್, ದಿವಾಕರ್, ರಾಮಚಂದ್ರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕುಮಾರ್, ನಿವೃತ ಅಧಿಕಾರಿ ಮಣಜೂರು ಮಂಜುನಾಥ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕೆ.ಕೆ. ನಾಗರಾಜ್ ಶೆಟ್ಟಿ, ಜಯಪ್ರಕಾಶ್, ವಿನೋದ್, ಕುಶಾಲನಗರ ಅರಣ್ಯ ಇಲಾಖೆಯ ನಾಣಯ್ಯ,ಸಾಯಬಣ್ಣ ತಳವಾರ್ ಇದ್ದರು.
ವಾರಾಂತ್ಯದ ರಜಾ ದಿನ ಆದ ಕಾರಣ ನಿಸರ್ಗಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸೇರಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್. ಜಾನಕಿಯವರ ಅಗಲಿಕೆಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.