ನಾಪೋಕ್ಲು ಅಂಕುರ್ ಶಾಲೆಯಲ್ಲಿ ಸ್ವಾತಂತ್ರೊೃೀತ್ಸವ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧೆಯನ್ನು ಎಎಸ್‌ಐ ಪ್ರಕಾಶ್ ಉದ್ಘಾಟಿಸಿದರು.ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ, ಪ್ರಾಂಶುಪಾಲ ಮಮತಾ, ರಂಜನ್ ಇತರರು ಇದ್ದರು.
ನಾಪೋಕ್ಲು:
ಇಲ್ಲಿನ ಅಂಕುರ್ ಶಾಲೆ ವತಿಯಿಂದ ಸ್ವಾತಂತ್ರೊೃೀತ್ಸವ ಅಂಗವಾಗಿ ವಿವಿಧತೆಯಲ್ಲಿ ಏಕತೆ ಸಾರುವ ಸಲುವಾಗಿ ಶನಿವಾರ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿತ್ತು.
ಕೊಟ್ಟಮುಡಿ ಜಂಕ್ಷನ್‌ನಿಂದ ಹಳೇ ತಾಲೂಕುವರೆಗೆ ನಡೆದ ಓಟದ ಸ್ಪರ್ಧೆಗೆ ಎಎಸ್‌ಐ ಪ್ರಕಾಶ್ ಉದ್ಘಾಟಿಸಿದರು. ವಿವಿಧ ಶಾಲೆಗಳ 77 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿ ಎಂ.ಎಸ್.ಧೀಮಂತ್ ಪ್ರಥಮ ಸ್ಥಾನ, ಹರ್ಷಿತ್ ದ್ವಿತೀಯ ಸ್ಥಾನ ಹಾಗೂ ಶ್ರೀ ರಾಮ ಟ್ರಸ್ಟ್ ಶಾಲೆಯ ಲವ ಬಿ.ಜಿ ತೃತೀಯ ಸ್ಥಾನ ಪಡೆದರು.
ಬಾಲಕಿಯರ ಮ್ಯಾರಥಾನ್ ಸ್ಪರ್ಧೆಯಲ್ಲಿ ಅಂಕುರ್ ಶಾಲೆಯ ವಿದ್ಯಾರ್ಥಿನಿ ಶಿಖಾ ಮುತ್ತಮ್ಮ ಪ್ರಥಮ ಸ್ಥಾನ, ಕೆಪಿಎಸ್ ಶಾಲೆಯ ಫಾತಿಮತ್ ಫಿದಾ ದ್ವಿತೀಯ ಸ್ಥಾನ, ಅಂಕುರ್ ಶಾಲೆಯ ಕಾವೇರಮ್ಮ ತೃತೀಯ ಸ್ಥಾನ ಪಡೆದರು.
ನಂತರ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಅಂಕುರ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ, ಪ್ರಾಂಶುಪಾಲ ಮಮತಾ, ರಂಜನ್ ಇತರರು ಇದ್ದರು.