ಕೆದಕಲ್, ಹೊರೂರು, ಮೋದೂರು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಕಳುಹಿಸುವ ಸಲುವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು.  
ಕೊಡಗು

ಅರಣ್ಯಕ್ಕೆ ಮರಳಿದ ಕಾಡಾನೆಗಳ ಹಿಂಡು

ಪ್ರಮುಖ ಮುಖ್ಯಾಂಶಗಳು

  • ಕುಶಾಲನಗರ ಅರಣ್ಯ ವಲಯದ ಆನೆಕಾಡು ತಂಡದಿಂದ ಕಾರ್ಯಾಚರಣೆ
  • ಕೆದಕಲ್ ವ್ಯಾಪ್ತಿಯ ಕಾಫಿ ತೋಟದಲ್ಲಿದ್ದ ಆನೆಗಳು
ಸುಂಟಿಕೊಪ್ಪ: ಕೆದಕಲ್ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಆಹಾರ ಅರಸಿ ಬಂದು ಬಿಡುಬಿಟ್ಟು ಉಪಟಳ ನೀಡುತ್ತಿದ್ದ ಕಾಡಾನೆಗಳ ಹಿಂಡನ್ನು ಕುಶಾಲನಗರ ಅರಣ್ಯ ವಲಯದ ಆನೆಕಾಡು ತಂಡ ಶನಿವಾರ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಹಿಮ್ಮೆಟ್ಟಿಸಿದೆ.
ಕೆದಕಲ್, ಹೊರೂರು, ಮೋದೂರು ಕಾಫಿ ತೋಟಗಳಲ್ಲಿ ಕಾಡಾನೆ ಉಪಟಳ ಎಲ್ಲೆ ಮೀರಿದ್ದು, ಇದರಿಂದ ಕಾಫಿ ತೋಟದ ಬೆಳೆಗಾರರಿಗೆ ನಷ್ಟಗಳು ಉಂಟಾಗಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳು ಬಿಡು ಬಿಟ್ಟಿರುವ ಪ್ರದೇಶ ಪತ್ತೆಹಚ್ಚಿ ಕಾರ್ಯಾಚರಣೆ ಆರಂಭಿಸಿತು. ಉಪಟಳ ನೀಡುತ್ತಿದ್ದ 4 ಕಾಡಾನೆಗಳನ್ನು ಚೇರಳ ಮೀಸಲು ಅರಣ್ಯಕ್ಕೆ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
ಡಿಸಿಎಫ್ ವಿ.ಅಭಿಷೇಕ್ ಮಾರ್ಗದರ್ಶನದಲ್ಲಿ ಎಸಿಎಫ್ ನವೀನ್ ಕುಮಾರ್ ಮತ್ತು ವಲಯ ಅರಣ್ಯ ಅಧಿಕಾರಿ ರಕ್ಷಿತ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮಧು ಕುಮಾರ್, ಶಿವಕುಮಾರ್ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿದ್ದರು.