ಕೊಡಗು ಕಲಾವಿದರ ಬಳಗದ ವತಿಯಿಂದ ಚೆಯ್ಯಂಡಾಣೆಯ ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲಾ ಹಾಗೂ ನಾಣಯ್ಯ ದಂಪತಿ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಕೊಡಗಿನ ಸಿನಿಮಾ ಕಲಾವಿದರ ಸಮ್ಮಿಲನ ಕಾರ್ಯಕ್ರಮದಲ್ಲಿ ಹಲವಾರು ಹಿರಿ-ಕಿರಿಯ ಸಿನಿಮಾ ಕಲಾವಿದರುಗಳು, ಬರಹಗಾರರು, ನಿರ್ದೇಶಕರು, ಗಾಯಕರು, ಛಾಯಾಚಿತ್ರ ಕಲಾವಿದರು ಪಾಲ್ಗೊಂಡಿದ್ದರು. ಕೊಟ್ಟುಕತ್ತೀರ ಪ್ರಕಾಶ್, ನೆರವಂಡ ಉಮೇಶ್, ಯಶೋಧ ಪ್ರಕಾಶ್, ಬೀನಾ, ಪ್ರಭಾ ನಾಣಯ್ಯ ಮತ್ತಿತರರು ಇದ್ದರು.
ಕೊಡಗು ಕಲಾವಿದರ ಬಳಗದ ವತಿಯಿಂದ ಚೆಯ್ಯಂಡಾಣೆಯ ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲಾ ಹಾಗೂ ನಾಣಯ್ಯ ದಂಪತಿ ತೋಟದ ಮನೆಯಲ್ಲಿ ಈಚೆಗೆ ಕೊಡಗಿನ ಸಿನಿಮಾ ಕಲಾವಿದರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ಹಲವಾರು ಹಿರಿ-ಕಿರಿಯ ಸಿನಿಮಾ ಕಲಾವಿದರುಗಳು, ಬರಹಗಾರರು, ನಿರ್ದೇಶಕರು, ಗಾಯಕರು, ಛಾಯಾಚಿತ್ರ ಕಲಾವಿದರು ಈ ಸಂತಸ ಸಮ್ಮಿಲನದಲ್ಲಿ ಪಾಲ್ಗೊಂಡಿದ್ದರು.
ದಶಕಗಳ ಹಿಂದೆ ಆರಂಭಗೊAಡ ನೋಂದಾಯಿತ ಕಲಾವಿದರ ಸಂಘ ಕಾರ್ಯ ಚಟುವಟಿಕೆಗಳಿಲ್ಲದೆ ನಿಷ್ಕಿçಯವಾಗಿತ್ತು. ನಟ ನೆರವಂಡ ಉಮೇಶ್ ಮತ್ತು ತಂಡದವರ ಸಂಚಾಲಕತ್ವದಲ್ಲಿ ವರ್ಷದಿಂದೀಚೆಗೆ ಸಂಘ ಮರುಜೀವ ಪಡೆದುಕೊಂಡಿದ್ದು ಸಂಘದ ಈ ಕಾರ್ಯಕ್ರಮದಿಂದಾಗಿ ರಾಜ್ಯದ ಹಲವೆಡೆಗಳಿಂದ ಆಗಮಿಸಿದ್ದ ಕಲಾವಿದರುಗಳು ಒಂದೆಡೆ ಸೇರುವಂತಾಗಿತ್ತು.
ಮೈಸೂರಿನಲ್ಲಿ ನೆಲೆಸಿರುವ ಸಂಗೀತಗಾರ, ಹಾರ್ಮೋನಿಯಂ ವಾದಕ ಚೆಕ್ಕೇರ ಅಪ್ಪಯ್ಯ ಅವರ ಉಪಸ್ಥಿತಿ, ಮಾತು, ಹಾಡು ಎಲ್ಲರಲ್ಲಿ ಸಂಚಲನ ಮೂಡಿಸಿತು. ಟಿ.ಡಿ. ಮೋಹನ್ ಅವರ ಪ್ರಾರ್ಥನೆ, ಭವಾನಿ ನಾಣಯ್ಯ ಅವರ ದೈವಸ್ತುತಿ, ಅಜಿತ್, ಬೋಸು ಅವರುಗಳಿಂದ ಹಾಡು, ಕಲಾವಿದೆ ಶ್ಯಾಮಲ ಅವರ ನೃತ್ಯ ಸೇರಿದ್ದವರನ್ನು ರಂಜಿಸಿತು.
ಕಲಾಸೇವೆ ಹಾಗೂ ಕಲಾವಿದರಿಗೆ ನೀಡಿದ ಆತಿಥ್ಯ ಗಮನಿಸಿ ಸುಜಲಾ ಹಾಗೂ ನಾಣಯ್ಯ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ನಟ, ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್, ಕಲಾವಿದ ನೆರವಂಡ ಉಮೇಶ್ ಮಾತನಾಡಿದರು. ನಿರ್ದೇಶಕಿ ಯಶೋಧ ಪ್ರಕಾಶ್, ಅಪಾಡಂಡ ರಘು ಅವರ ಪುತ್ರಿ, ಗಾಯಕಿ ಬೀನಾ, ಹಿರಿಯ ನಟಿ ಪ್ರಭಾ ನಾಣಯ್ಯ ಹಾಗೂ ಇತರರು ಇದ್ದರು.