ಬೇತು ಗ್ರಾಮದಲ್ಲಿರುವ ಮಕ್ಕಿ ಶಾಸ್ತಾವು ಸನ್ನಿಧಿ. 
ಕೊಡಗು

ಶ್ರೀ ಶಾಸ್ತಾವು ಹಬ್ಬಕ್ಕೆ ಸಂಭ್ರಮದ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮಡಿಕೇರಿ ತಾಲೂಕಿನ
  • ಬೇತು ಗ್ರಾಮ
  • ಶ್ರೀಮಕ್ಕಿ ಶಾಸ್ತ ದೇವಸ್ಥಾನ
ನಾಪೋಕ್ಲು: ಮಡಿಕೇರಿ ತಾಲೂಕಿನ ಬೇತು ಗ್ರಾಮದ ಶ್ರೀಮಕ್ಕಿ ಶಾಸ್ತ ದೇವಸ್ಥಾನದಲ್ಲಿ ಶ್ರೀ ಶಾಸ್ತಾವು ಹಬ್ಬಕ್ಕೆ ಚಾಲನೆ ದೊರೆತಿದ್ದು, ಡಿ.19ರಂದು ಮುಕ್ತಾಯಗೊಳ್ಳಲಿದೆ.
ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೇರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾ ಹಬ್ಬ ನಡೆಯಲಿದೆ. ಡಿ.15ರಂದು ಹರಕೆಯ ನಾಯಿ ಮಣ್ಣಿನ ಪ್ರತಿ ಕೃತಿ ಒಪ್ಪಿಸಲಾಗಿದೆ. 17ರಂದು ಕೊಟ್ಟಿ ಹಾಡುವುದು, 18ರಂದು ರಾತ್ರಿ ದೀಪಾರಾಧನೆ (ಅಂದಿ ಬೊಳಕ್) ನಡೆಯಲಿದೆ.
ಬಳಿಕ ಕರಿಬಾಳೆ, ಕುಟ್ಟಿಚಾತ, ನುಚ್ಚಿಟ್ಟೆ ಕೋಲಗಳು ನಡೆಯುತ್ತವೆ. ಡಿ.19ರಂದು ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿದೆ. ಬಳಿಕ ವಿಷ್ಣುಮೂರ್ತಿ (ಚೌಂಡಿ ಅಗ್ನಿ ಪ್ರವೇಶ) ಮೇಲೇರಿ ನಡೆದು ಭಕ್ತರಿಂದ ಹರಕೆ, ಕಾಣಿಕೆ ಒಪ್ಪಿಸಲಿದ್ದು, ಆ ಮೂಲಕ ಸಂಪನ್ನಗೊಳ್ಳಲಿದೆ.