ಮಾಲಂಬಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಹೊಸಹಳ್ಳಿ ಗ್ರಾಮದ ಗೋಪಿನಾಥ್ ಎಂಬುವರ ಮನೆ ಹತ್ತಿರದ ಬಾರಿ ಗಾತ್ರದ ಮರವೊಂದು ಬಡು ಸಮೇತ ಬಿದ್ದು, ಮನೆಗೆ ಹಾನಿಯಾಗಿದೆ. 
ಕೊಡಗು

ಬುಡ ಸಮೇತ ಬಿದ್ದ ಮರ ತಪ್ಪಿದ ಅನಾಹುತ

ಪ್ರಮುಖ ಮುಖ್ಯಾಂಶಗಳು

  • A fallen tree
ಶನಿವಾರಸಂತೆ: ಬಾರಿ ಮಳೆ, ಗಾಳಿಗೆ ವಾಸದ ಮನೆ ಹತ್ತಿರದಲ್ಲಿದ್ದ ಭಾರಿ ಗಾತ್ರದ ಮರವೊಂದು ಬುಡ ಸಮೇತವಾಗಿ ಬಿದ್ದು, ಅದೃಷ್ಟವಶಾತ್ ಮನೆ ಮಂದಿ ಸ್ವಲ್ಪದರಲ್ಲೇ ಅನಾಹುತದಿಂದ ಪಾರಾಗಿದ್ದಾರೆ.
ಮಾಲಂಬಿ-ಹೊಸಗುತ್ತಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿಯಿಂದಾಗಿ ಗ್ರಾಮದ ಗೋಪಿನಾಥ್ ಎಂಬುವರ ಮನೆ ಪಕ್ಕದಲ್ಲಿನ ಮರ ಬಿದ್ದಿದೆ. ಇದರ ಕೊಂಬೆ ಮನೆಗೆ ತಗಲುಲಿದ್ದು, ಹೆಂಚುಗಳು ಒಡೆದು ಹಾನಿಯಾಗಿದೆ. ಮನೆಯಲ್ಲಿದ್ದ ಗೋಪಿನಾಥ್, ಪತ್ನಿ ಮತ್ತು ಇಬ್ಬರು ಪುತ್ರಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.