ಸೋಮವಾರಪೇಟೆಯ ಸಂತಜೋಸೆಫರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ರಾಜೇಂದ್ರ, ದಯಾ, ಅವಿನಾಶ್ ಇದ್ದರು.  
ಕೊಡಗು

ಪರಿಪಕ್ವ ಅಭ್ಯಾಸದಿಂದ ಉಜ್ವಲ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ಧರ್ಮಗುರು ರಾಜೇಂದ್ರ ಅಭಿಮತ
  • ಸಂತಜೋಸೆಫರ ಪದವಿ ಕಾಲೇಜಿನ ಪದವಿ ಪ್ರದಾನ
ಸೋಮವಾರಪೇಟೆ: ಪಟ್ಟಣದ ಒಎಲ್‌ವಿ ಸಭಾಂಗಣದಲ್ಲಿ ಮಂಗಳವಾರ ಇಲ್ಲಿನ ಸಂತಜೋಸೆಫರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಮರಿಯಾನಗರ ಧರ್ಮಕೇಂದ್ರದ ಗುರು ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಪಾಲಕರು ಹಾಗೂ ಗುರುಗಳಿಗೆ ವಿಧೇಯರಾಗಿರಬೇಕು. ಶಾಲಾ ಕಾಲೇಜು ಹಂತದಲ್ಲಿಯೇ ಪರಿಪಕ್ವತೆಯಿಂದ ಕೂಡಿದ ವಿದ್ಯಾಭ್ಯಾಸ, ನಿರ್ದಿಷ್ಟ ಗುರಿ, ಆತ್ಮವಿಶ್ವಾಸ ಬೆಳೆಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳು ಸಾಧ್ಯ ಎಂದು ಹೇಳಿದರು.
ಸಿಸ್ಟರ್ ದಯಾ ಮಾತನಾಡಿ, ವಿದ್ಯಾರ್ಥಿಗಳು ಭವಿಷವನ್ನು ಸುಭದ್ರವಾಗಿ ರೂಪಿಸಿಕೊಳ್ಳುವಂತೆ ಹಾಗೂ ಜೀವನದ ಮಹತ್ವದ ತೀರ್ಮಾನಗಳನ್ನು ವಿವೇಕದಿಂದ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಸಂತ ಜೋಸೆಫರ ವಿದ್ಯಾಸಂಸ್ಥೆ ಸಂಚಾಲಕ ಅವಿನಾಶ್ ಅಧ್ಯಕ್ಷತೆವಹಿಸಿದ್ದರು. ಒಎಲ್‌ವಿ ಚರ್ಚ್‌ನ ಕಾರ್ಯದರ್ಶಿ ಶೀಲಾ ಡಿಸೋಜ, ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ಹರೀಶ್ ಮತ್ತಿತರರು ಇದ್ದರು. ಭಾರತೀಯ ಸೇನೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಪಿ.ಸಿ.ರಿತೇಶ್. ಎಚ್.ಡಿ.ಧೀರಜ್ ಹಾಗೂ ಬಿ.ಕೆ.ಮೋಕ್ಷಿತ್ ಅವರನ್ನು ಸನ್ಮಾನಿಸಲಾಯಿತು.