ಆಲೂರು ಸಿದ್ದಾಪುರ ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು. ಎಸ್‌ಎಸ್2 ಮುಳ್ಳೂರು ಸ.ಕಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು
ಶನಿವಾರಸಂತೆ: ಇತ್ತೀಚೆಗೆ ಕುಶಾಲನಗರದ ರೈತ ಭವನದಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 9ನೇ ಕರಾಟೆ ಮತ್ತು ಯೋಗ ಚಾಂಪಿಯನ್‌ಶಿಪ್‌ನಲ್ಲಿ ಆಲೂರು ಸಿದ್ದಾಪುರ ಆಂಗ್ಲ ಮಾಧ್ಯಮ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 47 ವಿದ್ಯಾರ್ಥಿಗಳಲ್ಲಿ 19 ಪ್ರಥಮ, 16 ದ್ವಿತೀಯ ಮತ್ತು 12 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 18 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಕತಾ ವಿಭಾಗದಲ್ಲಿ 11 ಪ್ರಥಮ, 6 ದ್ವಿತೀಯ ಮತ್ತು 2 ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ಸಾಧನೆಗಾಗಿ ಈ ವಿದ್ಯಾರ್ಥಿಗಳು ವಿಶೇಷ ಟ್ರೋಫಿಯನ್ನೂ ಪಡೆದಿದ್ದಾರೆ.
ಉಭಯ ಶಾಲೆಗಳ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ಶಿಕ್ಷಕಿ ಎಂ.ವಿ.ನಳಿನಾಕ್ಷಿ ತರಬೇತಿ ನೀಡಿದ್ದರು.