2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಮೂಲ ಹಂತದ ಸಮೀಕ್ಷೆಯ ಸಂದರ್ಭ  
ಕೊಡಗು

ಕೊಡಗಿನಲ್ಲಿ 50 ಮಂದಿ ಲಿಂಗತ್ವ ಅಲ್ಪಸಂಖ್ಯಾತರು

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಕೆ
  • ಸೌಲಭ್ಯ ಹಂಚಿಕೆಗೆ ಗಣತಿ
  • ವರದಿ ಸಂಬoಧ ಎದ್ದಿದೆ ತಕರಾರು
ಮಡಿಕೇರಿ:
ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆದಿರುವ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಕೊಡಗಿನಲ್ಲಿ ಈ ಸಮುದಾಯಕ್ಕೆ ಸೇರಿದ 50 ಮಂದಿ ಇರುವುದಾಗಿ ವರದಿಯಲ್ಲಿ ಹೇಳಲಾಗಿದೆ. ವಿಶೇಷ ಎಂದರೆ ಇವರ ಪೈಕಿ 25 ಮಂದಿ ವಿವಾಹಿತರೂ ಇರುವುದಾಗಿಯೂ ಘೋಷಣೆ ಮಾಡಿಕೊಂಡಿದ್ದಾರೆ. ಇಬ್ಬರು ಸ್ನಾತಕೋತ್ತರ ಪದವೀಧರರೂ ಇರುವುದು ಸೇರಿದಂತೆ ಹಲವು ಆಸಕ್ತಿಕರ ಮಾಹಿತಿಗಳು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಲಿಂಗತ್ವ ಅಲ್ಪಸಂಖ್ಯಾತರ ಎಲ್ಲಾ ಪ್ರವರ್ಗಗಳು ಎದುರಿಸುವ ಭಯ, ಅವಮಾನ, ಲಿಂಗ ತಾರತಮ್ಯತೆ, ಸಾಮಾಜಿಕ ತಾರತಮ್ಮ ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಸಮಸ್ಯೆಗಳಿಂದ ಹೊರತರಲು, ಕಿರುಕುಳಕ್ಕೆ ಒಳಗಾಗುವುದರ ಜತೆಗೆ ಸಮಾಜದಿಂದ ದೂರ ಉಳಿದಿರುವರಿಗೆ ಸಮಾಜದಲ್ಲಿ ಇವರಿಗೆ ನೆಲೆ ಕಲ್ಪಿಸುವ ಮೂಲ ಉದ್ದೇಶದ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಮೂಲ ಹಂತದ ಸಮೀಕ್ಷೆಯನ್ನು 2025ರ ಸೆ. 15ರಿಂದ ನ. 21ರ ತನಕ ರಾಜ್ಯಾದ್ಯಂತ ನಡೆಸಲಾಗಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 10,250 ಮತ್ತು 18 ವರ್ಷ ಒಳಗಿನ 115 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇರುವುದು ಕಂಡುಬAದಿದ್ದು, ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 1,428 ಜನರು ಈ ಸಮುದಾಯಕ್ಕೆ ಸೇರಿದವರು ಇದ್ದಾರೆ. ಕೊಡಗಿನಲ್ಲಿ 50 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದು ಇದರಲ್ಲಿ 19-30 ವರ್ಷದ 14, 31-45 ವರ್ಷದ 23, 46-60 ವರ್ಷದ 11 ಹಾಗೂ 60 ವರ್ಷ ಮೇಲ್ಪಟ್ಟವರು ಇಬ್ಬರು ಇದ್ದಾರೆ. ಈ ಪೈಕಿ 40 ಮಂದಿ ಹುಟ್ಟುವಾಗ ಗಂಡು, 6 ಮಂದಿ ಹೆಣ್ಣಾಗಿ ಹುಟ್ಟಿದ್ದು, ನಂತರದ ದಿನಗಳಲ್ಲಿ 37 ಮಂದಿ ಗಂಡು, ಐವರು ಹೆಣ್ಣು ಹಾಗೂ ನಾಲ್ವರು ಟ್ರಾನ್ಸ್ಜೆಂಡರ್ ಆಗಿ ಪರಿವರ್ತನೆ ಆಗಿದ್ದಾರೆ.
ಇವರಲ್ಲಿ 45 ಹಿಂದು, ಇಬ್ಬರು ಮುಸ್ಲಿಂ, ಓರ್ವ ಕ್ರೆöÊಸ್ತ ಇದ್ದಾರೆ. ಉಳಿದ ಇಬ್ಬರು ಧರ್ಮದ ಮಾಹಿತಿ ನೀಡಸಲು ನಿರಾಕರಿಸಿದ್ದಾರೆ. ಪರಿಶಿಷ್ಟ ಜಾತಿಯ 11, ಪರಿಶಿಷ್ಟ ಪಂಗಡದ 5, ಹಿಂದುಳಿದ ವರ್ಗಗಳ 22, ಇತರೆ 10 ಮಂದಿ ಇದರಲ್ಲಿ ಸೇರಿದ್ದು ಇಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. 25 ಮಂದಿ ವಿವಾಹ ಆಗಿದ್ದರೆ 23 ಮಂದಿ ಅವಿವಾಹಿತರಾಗಿ ಉಳಿದಿದ್ದಾರೆ. ಇಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. 12 ಮಂದಿ ಅನಕ್ಷರಸ್ತರಾಗಿದ್ದು, ನಾಲ್ವರು ಪ್ರಾಥಮಿಕ, ಐವರು ಹಿರಿಯ ಪ್ರಾಥಮಿಕ, ಐವರು ಪ್ರೌಢಶಾಲೆ, ಒಬ್ಬರು ಎಸ್‌ಎಸ್‌ಎಲ್‌ಸಿ, ಒಬ್ಬರು ಪಿಯುಸಿ, ಇಬ್ಬರು ಇತರೆ ಪದವಿ, ಇಬ್ಬರು ಸ್ನಾತಕೋತ್ತರ ಪದವಿ, ಹಾಗೂ 10 ಮಂದಿ ಇತರೆ ವ್ಯಾಸಂಗ ಮಾಡಿದ್ದಾರೆ.
ಶಿಕ್ಷಣ ಪಡೆಯುವ ಸಂದರ್ಭ 6 ಮಂದಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇಬ್ಬರು ಶಿಕ್ಷಣ ಸಂಸ್ಥೆಯಿAದ ಹೊರಬಂದಿದ್ದಾರೆ. 8 ಮಂದಿ ಶಿಕ್ಷಣ ಸಂಸ್ಥೆಯಲ್ಲಿ ತಾರತಮ್ಯಕ್ಕೆ ಒಳಗಾಗಿರುವ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ. ಜಿಲ್ಲೆಯ 50 ಮಂದಿ ಪೈಕಿ 20 ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಉಳಿದವರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಕಂಡುಕೊAಡಿದ್ದಾರೆ. 48 ಮಂದಿ ಕರ್ನಾಟಕದವರೇ ಆಗಿದ್ದು, ಇಬ್ಬರು ಹೊರ ರಾಜ್ಯದವರು ಇದ್ದಾರೆ.
11 ಮಂದಿ ಕುಟುಂಬದಿAದ ಸ್ವೀಕೃತರಾದವರು ಇದ್ದರೆ, ಉಳಿದ 39 ಜನರನ್ನು ಕುಟುಂಬ ಸ್ವೀಕರಿಸದೇ ಇರುವ ಆತಂಕಕಾರಿ ಮಾಹಿತಿಯೂ ಸಮೀಕ್ಷೆಯಲ್ಲಿ ಇದೆ. ಐವರು ಅಲವಂಬಿತರಿದ್ದು, 43 ಮಂದಿ ಸ್ವಾವಲಂಬಿಗಳಾಗಿದ್ದಾರೆ. ಉಳಿದ ಇಬ್ಬರು ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಇಬ್ಬರು ರಾಜ್ಯ ಸರ್ಕಾರದ ನೌಕರಿಯಲ್ಲಿ ಇದ್ದಾರೆ. ಐವರು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಸ್ವಯಂ ಉದ್ಯೋಗಿಯಾಗಿದ್ದು, 42 ಮಂದಿ ಇತರೆ ಉದ್ಯೋಗಗಳನ್ನು ಮಾಡುತ್ತಿದ್ದಾರೆ. 42 ಮಂದಿಯೂ ವಾರ್ಷಿಕ 1 ಲಕ್ಷದೊಳಗಿನ ಆದಾಯ ಮಿತಿಯಲ್ಲಿದ್ದು, 7 ಮಂದಿ 1-3 ಲಕ್ಷ ಆದಾಯ ಹೊಂದಿದ್ದಾರೆ. ಒಬ್ಬರು ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ.
32 ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿಕೊAಡಿದ್ದಾರೆ. 18 ಮಂದಿ ಈ ಬಗ್ಗೆ ಮಾಹಿತಿ ಕೊಡಲು ನಿರಾಕರಿಸಿದ್ದಾರೆ. ಒಬ್ಬರು ಮೈತ್ರಿ ಮಾಸಿಕ ಭತ್ಯೆ ಪಡೆಯುತ್ತಿದ್ದು, ಒಬ್ಬರು ಗೃಹಲಕ್ಷಿö್ಮÃ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 49 ಮಂದಿ ಸರ್ಕಾರಿ ಸೌಲಭ್ಯದ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಐವರಿಗೆ ಸ್ವಂತ ಮನೆ ಇದೆ. 41 ಮಂದಿ ಬಾಡಿಗೆ ಮನೆಯಲ್ಲಿ ಇರುವವರಾಗಿದ್ದಾರೆ. ಒಬ್ಬರು ಭೋಗ್ಯದ ಮನೆಯಲ್ಲಿ ಇದ್ದರೆ, ಮೂವರು ಪೋಷಕರ ಮನೆಯಲ್ಲಿದ್ದಾರೆ. ಒಬ್ಬರಿಗೆ ನೀರಾವರಿ ಕೃಷಿ ಭೂಮಿ ಇದೆ.
ಸರ್ಕಾರಕ್ಕೆ ಸಲ್ಲಿಕೆ ಆಗಿರುವ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಮೂಲ ಹಂತದ ಸಮೀಕ್ಷಾ ವರದಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಾಗೂ ಹಕ್ಕುಗಳ ರಕ್ಷಣೆಗೆ ಇರುವ ಈಗಿನ ಕಾರ್ಯಕ್ರಮಗಳು ಮತ್ತು ಪುನರ್‌ವಸತಿಗಾಗಿ ಮಾಡಬೇಕಿರುವ ಕೆಲಸಗಳ ಕುರಿತು ಶಿಫಾರಸುಗಳನ್ನೂ ಮಾಡಲಾಗಿದೆ.
ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಈ ವರದಿ ಬಗ್ಗೆ ಲಿಂಗತ್ವ ಅಲ್ಪಸಂಖ್ಯಾತರೇ ತಕರಾರು ತೆಗೆದಿದ್ದಾರೆ. ಕೊಡಗಿಗೆ ಸಂಬAಧಿಸಿದAತೆ ಈ ವರದಿ ಸಂಪೂರ್ಣ ಸುಳ್ಳುಗಳಿಂದ ಕೂಡಿದೆ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲೆಯಲ್ಲಿ ಕೊಡಗಿನಲ್ಲಿ ಕೂಡಿಗೆಯಲ್ಲಿ ಒಬ್ಬರು, ಕುಶಾಲನಗರದಲ್ಲಿ ಇಬ್ಬರು, ಮಡಿಕೇರಿಯಲ್ಲಿ ಒಬ್ಬರು ಹಾಗೂ ಮಾದಾಪಟ್ಟಣದಲ್ಲಿ ಒಬ್ಬರು ಮಾತ್ರ ಮಂಗಳಮುಖಿ ಇದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೂ ಹುಡುಕಿದರೆ 10-12 ಜನ ಸಿಗಬಹುದಷ್ಟೇ. ಉಳಿದವೆಲ್ಲಾ ಸರ್ಕಾರದ ಗುರಿ ತಲುಪಲು ಮಾಡಿರುವ ಸುಳ್ಳು ಸಮೀಕ್ಷೆ ಎಂದು ಆರೋಪಿಸಲಾಗುತ್ತಿದೆ. ಕೊಡಗಿನ ಸ್ಥಿತಿಗತಿ ಅರಿಯದ ಹೊರಗಿನವರು ಸಮೀಕ್ಷೆ ಮಾಡಿದ್ದರಿಂದ ಈ ರೀತಿ ಆಗಿದೆ ಎನ್ನುತ್ತಾರೆ ಸ್ಥಳೀಯ ಲಿಂಗತ್ವ ಅಲ್ಪಸಂಖ್ಯಾತರು. ಇಲ್ಲಿರುವ ನೈಜ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ಸರ್ಕಾರದ ಸವಲತ್ತುಗಳ ವಿಷಯಕ್ಕೆ ಬಂದಾಗ ಅರ್ಜಿಗಳ ಸಂಖ್ಯೆ ಹೆಚ್ಚು ತೋರಿಸಲಾಗುತ್ತದೆ ಎನ್ನಲಾಗುತ್ತ್ತಿದೆ.
"

ಕೊಡಗಿನಲ್ಲಿ ಇರುವುದೇ ಕೇವಲ ಐವರು ಲಿಂಗತ್ವ ಅಲ್ಪಸಂಖ್ಯಾತರು. ಇವರ ಸಮೀಕ್ಷೆಯಲ್ಲಿ 50 ಮಂದಿ ಹೇಗೆ ಬಂದರು ಗೊತ್ತಾಗುತ್ತಿಲ್ಲ. ಬರೀ 15 ಜನರನ್ನು ಇವರು ತೋರಿಸಲಿ ನೋಡೋಣ, ಅಸಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇಲಾಖೆಯಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ವಸತಿ ಯೋಜನೆಗಾಗಿ ನಾವು ಸಲ್ಲಿಸಿದ ಅರ್ಜಿ ಏನಾಯಿತು ಎನ್ನುವುದೇ ಗೊತ್ತಿಲ್ಲ. ನಮಗೆ ಆಧಾರ್ ಕಾರ್ಡ್ ಸಹ ಇಲ್ಲ. ನಮಗೆ ಅಲ್ಲಿ ಸ್ಪಂದನೆಯೂ ಸಿಗುವುದಿಲ್ಲ.

"

ನಮ್ಮ ಇಲಾಖೆ ಮೂಲಕ ಸಮೀಕ್ಷೆ ನಡೆಸಿದರೂ ಸಮೀಕ್ಷೆ ಮಾಡಿದವರು ಕೂಡ ಲಿಂಗತ್ವ ಅಲ್ಪಸಂಖ್ಯಾತರೇ ಆಗಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಈ ಸಮೀಕ್ಷೆ ನಡೆಸಲಾಗಿದೆ. ಈ ಸಮುದಾಯದ ಕೆಲವರು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಹಾಗಾಗಿ ವ್ಯತ್ಯಾಸ ಆಗಿರಬಹುದು. ಈ ಬಗ್ಗೆ ಮಾಹಿತಿ ನೀಡಿದರೆ ಅಂಕಿ-ಅAಶ ಸರಿಪಡಿಸಲಾಗುವುದು.