ಕೋಕೇರಿ ಗ್ರಾಮದ ಚೇನಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಸಕರ ಭೇಟಿ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. 
ಕೊಡಗು

ಹಾಕಿ ಉತ್ಸವಕ್ಕೆ ತೋರುತ್ತಿರುವ ಆಸಕ್ತಿ ಶ್ಲಾಘನೀಯ

ನಾಪೋಕ್ಲು: ನಾಪೋಕ್ಲುವಿನಲ್ಲಿ ಆಯೋಜಿಸಿರುವ 26ನೇ ವರ್ಷದ ಜೇನಂಡ ಹಾಕಿ ಕಪ್ ಉತ್ಸವ ವನ್ನು ಯಶಸ್ವಿಯಾಗಿ ಆಯೋಜಿಸಲು ಕುಟುಂಬಸ್ಥರು ತೋರುತ್ತಿರುವ ಉತ್ಸಾಹ, ಆಸಕ್ತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಶ್ಲಾಘಿಸಿದರು.
ಕೋಕೇರಿ ಗ್ರಾಮದ ಚೇನಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಸಕರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ಪ್ರತಿ ವರ್ಷವೂ ಹಾಕಿ ನಮ್ಮೆಯನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಪ್ರಸಕ್ತ ವರ್ಷ ನಾಪೋಕ್ಲುವಿನಲ್ಲಿ ಆಯೋಜಿಸಿರುವ ಚೇನಂಡ ಕಪ್ ಹಾಕಿ ಟೂರ್ನಿ, ಈ ಹಿಂದೆ ಜರುಗಿದ ಹಾಕಿ ಉತ್ಸವಕ್ಕಿಂತಲೂ ಹೆಚ್ಚಿನ ಯಶಸ್ವಿಯನ್ನು ಕಾಣಲಿ. ಕೊಡವ ಹಾಕಿ ನಮ್ಮೆಯ ಯಶಸ್ಸಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕಂಬನ್ನಿ ಕರುಂಬಯ್ಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಜೇನಂಡ ಕುಟುಂಬದ ಅಧ್ಯಕ್ಷ ಚಿಟ್ಟಿ ಅಪ್ಪಯ್ಯ, ಕ್ರಿಕೆಟ್ ನಮ್ಮೆ ಅಧ್ಯಕ್ಷ ಸಿ.ಕೆ.ಅಯ್ಯಪ್ಪ, ಕ್ರೀಡಾ ಅಕಾಡೆಮಿ ಕಾರ್ಯದರ್ಶಿ ಮಧು ಮಾದಯ್ಯ, ಒಲಿಂಪಿಯನ್ ಚೆಪ್ಪುಡಿರ ಪೂಣಚ್ಚ, ಈ ಹಿಂದೆ ಆಯೋಜಿಸಿದ್ದ ಹಾಕಿ ಉತ್ಸವದ ಪರವಾಗಿ ಉಪಸ್ಥಿತರಿದ್ದ ಕುಂಡ್ಯೋಳಂಡ ವಿಶು ಪೂವಯ್ಯ, ಅಪ್ಪಚೆಟ್ಟೋಳಂಡ ರವಿ, ಜೇನಂಡ ಜಪ್ಪು ದೇವಯ್ಯ, ಅಕಾಡೆಮಿ ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬಾ, ಖಜಾಂಚಿ ದೀಪಕ್ ಚಟಗಪ್ಪ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ತಳಿಯಕ್ಕಿ ಬೊಳಕ್,ದುಡಿಕೊಟ್ ಪಾಟ್ ನೊಂದಿಗೆ ಶಾಸಕರನ್ನು ಗೌರವ ಯತವಾಗಿ ಬರಮಾಡಿಕೊಂಡು ಕೈ ಮಡ ಹಾಗೂ ಐನ್‌ಮನೆಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು.