ಜೆನ್ ಶಿಟೋ ರಿಯೋ ಕರಾಟೆ ಅಕಾಡೆಮಿಯ 29ನೇ ಅಖಿಲ ಭಾರತ ಶಿಟೋ ರಿಯೋ ಕರಾಟೆ-ಡೋ ಚಾಂಪಿಯಷಿಪ್-2026ನಲ್ಲಿ ಪದಕ ಪಡೆದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು.
ವಿರಾಜಪೇಟೆ: ಜೆನ್ ಶಿಟೋ ರಿಯೋ ಕರಾಟೆ ಅಕಾಡೆಮಿಯ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 29ನೇ ಅಖಿಲ ಭಾರತ ಶಿಟೋ ರಿಯೋ ಕರಾಟೆ-ಡೋ ಚಾಂಪಿಯನ್‌ಷಿಪ್-2026ರಲ್ಲಿ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸ್ಥಳೀಯ ಸಂಸ್ಥೆಯ ಒಟ್ಟು 22 ಕರಾಟೆ ಪಟುಗಳು ಕುಮಿತೆ ಹಾಗೂ ಕಟಾ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ನೀಡಿ ವಿವಿಧ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಪಂದ್ಯಾವಳಿಯ ಕುಮಿತೆ ಹಾಗೂ ಕಟಾ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಿ.ವಿ.ಚೈತನ್ಯ ಎರಡೂ ವಿಭಾಗಗಳಲ್ಲೂ ಚಿನ್ನದ ಪದಕಗಳನ್ನು ಪಡೆದು ಅತ್ಯುತ್ತಮ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅದೇ ರೀತಿ, ಡಿ.ಧೃತಿಕ್, ಕೆ.ಎಚ್.ಕಾರ್ತಿಕ್, ಎನ್.ಬಿ.ಪ್ರಜನ್, ಕೆ.ಬಿ.ಆದರ್ಶ, ಟಿ.ಎಸ್.ಅನುರಾಗ್, ಎಸ್.ಆರ್.ಧನುಶ್ರೀ ಅವರು ಕುಮಿತೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ್ದಾರೆ. ಹರಿಧಾ ಅವರು ಕಟಾದಲ್ಲಿ ಚಿನ್ನ ಹಾಗೂ ಕುಮಿತೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಎರಡೂ ವಿಭಾಗಗಳಲ್ಲಿ ಪದಕ ಪಡೆದವರು: ಧವನ್ ಬಿ.ಎ.(ಕಂಚು/ಬೆಳ್ಳಿ), ಸಮಿತ್ ಪಿ.ಬಿ.(ಬೆಳ್ಳಿ/ಕಂಚು), ದೇನಿಷ್ ಪಿ.ಎಲ್. (ಬೆಳ್ಳಿ/ಬೆಳ್ಳಿ), ಕೃತಿಕ್ ಎಂ.(ಬೆಳ್ಳಿ/ಕಂಚು), ಕೃಷಾಂಕ್ ಎಂ.ಎಸ್.(ಕಂಚು/ಕಂಚು), ಅಭಿನವ್ ಟಿ.ಎಸ್.(ಬೆಳ್ಳಿ/ಬೆಳ್ಳಿ), ಧ್ಯಾನ್ ಟಿ.ಎಚ್.(ಬೆಳ್ಳಿ/ಕಂಚು), ಗಾನವಿ ಎನ್.ಎಲ್.(ಕಂಚು/ಬೆಳ್ಳಿ).
ಕಟಾ ವಿಭಾಗದಲ್ಲಿ ಪದಕ ಪಡೆದವರು: ಅದಿದೇವ್ ಎನ್.ಎಸ್.(ಕಂಚು), ಬಿಂದ್ಯಾ ಪಿ.ಬಿ.(ಬೆಳ್ಳಿ), ಕೀರ್ತನಾ ಜಿ.(ಕಂಚು), ನಿರಂಜನಾ ಎಂ.ಎಂ.(ಕಂಚು), ಸಾನ್ವಿ ಪಿ.ವಿ. (ಬೆಳ್ಳಿ) ಹಾಗೂ ಹಿಮಾನಿ (ಬೆಳ್ಳಿ).ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳ ಈ ಅತ್ಯುತ್ತಮ ಪ್ರದರ್ಶನಕ್ಕೆ ತರಬೇತುದಾರರು, ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಕಾಡೆಮಿಯ ಕ್ಯೋಶಿ ರಾಹುಲ್ ತೌಡೆ ಮತ್ತು ಅನಿಲ್‌ಕುಮಾರ್ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.