ಮೊಬೈಲ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೈಬರ್ ಕ್ರೆöÊಂ ಪೊಲೀಸ್ ತಂಡÀ. ಆರ್.ಎನ್. ಬಿಂದುಮಣಿ, ಸೂರಜ್, ಮೇದಪ್ಪ, ಲಕ್ಷೀಕಾಂತ್ ತಳವಾರ್, ಚಂದ್ರಶೇಖರ್, ರಾಜು ಇದ್ದಾರೆ. 
ಕೊಡಗು

ಮಾಲೀಕರ ಕೈ ಸೇರಿದ 104 ಮೊಬೈಲ್ ಫೋನ್

ಪ್ರಮುಖ ಮುಖ್ಯಾಂಶಗಳು

  • ಕೊಡಗು ಸೈಬರ್ ಕ್ರೆöÊಂ ಪೊಲೀಸರ ಕಾರ್ಯಚರಣೆ
  • ಕಳುವಾಗಿದ್ದ ಫೋನ್ ಪತ್ತೆಹಚ್ಚಿದ ಪೊಲೀಸರು
  • ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ
ಮಡಿಕೇರಿ:
ಮೊದಲ ಸಂಬಳದಲ್ಲಿ ಖರೀದಿಸಿದ ಫೋನ್, ಅಪ್ಪ ಪ್ರೀತಿಯಿಂದ ಕೊಟ್ಟಿದ್ದ ಮೊಬೈಲ್, ಮದುವೆ ವಾರ್ಷಿಕೋತ್ಸವದ ನೆನಪಿಗೆಂದು ಪತಿ ಅಕ್ಕರೆಯಿಂದ ನೀಡಿದ್ದ ಫೋನ್, ಪ್ರಿಯಕರನಿಂದ ಉಡುಗೊರೆಯಾಗಿ ಬಂದಿದ್ದ ಫೋನ್...ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಬಾಂಧವ್ಯದ ಬೆಸುಗೆ ಹೊಂದಿದ್ದ ಫೋನ್‌ಗಳು ಕಳೆದು ಹೋಗಿ ಮರಳಿ ಸಿಕ್ಕಿದರೆ ಪಡೆದುಕೊಂಡವರ ಪ್ರತಿಕ್ರಿಯೆ ಹೇಗಿರಬಹುದು ? ಇಂಥದ್ದೊAದು ಭಾವನಾತ್ಮಕ ಸನ್ನಿವೇಶಕ್ಕೆ ಮಡಿಕೇರಿಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿ ಮಂಗಳವಾರ ಸಾಕ್ಷಿಯಾಯಿತು.
2022ರಿಂದ ಈಚೆಗೆ ಕಳುವಾಗಿದ್ದ, ವಿವಿಧ ರೀತಿಯಲ್ಲಿ ಕಳೆದುಕೊಂಡಿದ್ದ 104 ಮೊಬೈಲ್ ಫೋನ್‌ಗಳನ್ನು ಕೊಡಗು ಸೈಬರ್ ಕ್ರೆöÊಂ ಪೊಲೀಸರು ಜನವರಿ ಮೊದಲ ವಾರದಿಂದ ಈಚೆಗೆ ಬಿರುಸಿನ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬAಧಿಸಿದAತೆ ಸೈಬರ್ ಕ್ರೆöÊಂ ಪೊಲೀಸರು ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆ, ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳಲ್ಲೂ ಈ ಸಂಬAಧ ಕಾರ್ಯಾಚರಣೆ ನಡೆಸಲಾಗಿತ್ತು.
ಕೊಡಗಿನಿಂದ ನಾಪತ್ತೆಯಾಗಿದ್ದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿ ಸುಮಾರು 11 ಲಕ್ಷ ರೂ ಮೌಲ್ಯದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗೆ ಪತ್ತೆಯಾದ ಮೊಬೈಲ್‌ಗಳನ್ನು ಕೊಡಗು ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಆಧಾರದಲ್ಲಿ ವಾರಸುದಾರರಿಗೆ ಮರಳಿಸಲಾಯಿತು. ನಾಲ್ಕು ವರ್ಷಗಳಿಂದ ಈಚೆಗೆ ಕಳೆದುಕೊಂಡಿದ್ದ ಫೋನ್‌ಗಳು ಇದರಲ್ಲಿ ಇದ್ದರೂ 2025ರಲ್ಲಿ ಕಳೆದುಕೊಂಡಿದ್ದ ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.
ಕಳೆದುಕೊಂಡಿದ್ದ ಫೋನ್‌ಗಳು ಮತ್ತೆ ಸಿಗುವ ಬಗ್ಗೆ ಹೆಚ್ಚಿನವರು ಭರವಸೆ ಕಳೆದುಕೊಂಡಿದ್ದರು. ಆದರೆ ಕೊಡಗು ಸೈಬರ್ ಕ್ರೆöÊಂ ಠಾಣೆ ಪೊಲೀಸರು ಇಂಥವರಲ್ಲಿ ಹೊಸ ಭರವಸೆ ಚಿಗುರುವುದಕ್ಕೆ ಕಾರಣರಾದರು. ಕೆಲವರಂತೂ ವಿವಿಧ ಕಾರಣಗಳಿಂದ ತಮ್ಮ ಮೊಬೈಲ್‌ಗಳ ಜತೆ ಭಾವನಾತ್ಮನ ನಂಟು ಇಟ್ಟುಕೊಂಡಿದ್ದರು. ಫೋನ್ ಕಳೆದುಕೊಂಡಾಗ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಷ್ಟೇ ದುಃಖಿತರಾಗಿದ್ದರು. ಇಂಥ ಫೋನ್‌ಗಳನ್ನು ಪೊಲೀಸರು ಮರಳಿ ಸಿಗುವಂತೆ ಮಾಡಿದಾಗ ದೊಡ್ಡ ನಿಧಿಯೊಂದು ಸಿಕ್ಕಿದ ಖುಷಿ ಹಲವರಲ್ಲಿ ಕಂಡುಬAತು.
ಸೋಮವಾರಪೇಟೆಯ ಸಾದಿಕ ಸೇರಿ ಹಲವರು ತಮ್ಮ ಫೋನ್‌ನೊಂದಿಗೆ ಇಟ್ಟುಕೊಂಡಿದ್ದ ನಂಟು ಮತ್ತು ಅದರ ಜತೆಗಿನ ಭಾವನಾತ್ಮಕ ಬಂಧ ಹಾಗೂ ಇದೀಗ ಆ ಫೋನ್ ಮರಳಿ ಸಿಕ್ಕಿರುವುದರಿಂದ ಪೊಲೀಸರಿಂದ ಫೋನ್ ಸ್ವೀಕರಿಸುವ ವೇಳೆ ಗದ್ಗದಿತರಾದರು. ಬೆಲೆಬಾಳುವ ಫೋನ್ ಅನ್ಯರ ಕೈಯಲ್ಲಿ ಸಿಕ್ಕಿ ಉಪಯೋಗಿಸಿ ಹಳತರಂತಾಗಿದ್ದರೂ ತಮ್ಮ ಫೋನ್ ಮರಳಿ ಕೈ ಸೇರಿದ ಬಗ್ಗೆ ಕೆಲವರು ಸಂತಸ ಹಂಚಿಕೊAಡರು. ಇನ್ನೂ ಕೆಲವರ ಫೋನ್ ಹೊಚ್ಚ ಹೊಸದರಂತೆಯೇ ಇರುವುದರ ಬಗ್ಗೆಯೂ ಖುಷಿಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಡಿವೈಎಸ್‌ಪಿಗಳಾದ ಸೂರಜ್, ಮೇದಪ್ಪ, ಲಕ್ಷೀಕಾಂತ್ ತಳವಾರ್, ವೃತ್ತನಿರೀಕ್ಷಕರಾದ ಚಂದ್ರಶೇಖರ್, ರಾಜು ಈ ಸಂದರ್ಭ ಇದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೈಬರ್ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಎಸ್‌ಪಿ ಬಿಂದುಮಣಿ ಇದೇ ವೇಳೆ ಅಭಿನಂದಿಸಿದರು.
"

ಮೊಬೈಲ್ ಫೋನ್ ಕಳೆದು ಹೋದ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಕಳುವು ಆದ ಅಥವಾ ಕಳೆದ ಹೋದ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಜನವರಿ ಮೊದಲ ವಾರದಿಂದ ಕಾರ್ಯಾಚರಣೆ ಆರಂಭಿಸಿ ನಮ್ಮಲ್ಲಿ ಇಂಥ 104 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೈಬರ್ ಠಾಣೆ ಪೊಲೀಸರ ಶ್ರಮ ಈ ನಿಟ್ಟಿನಲ್ಲಿ ಶ್ಲಾಘನಾರ್ಹವಾಗಿದೆ.

"

ಕುಶಾಲನಗರ ಬಸ್ ನಿಲ್ದಾಣದಲ್ಲಿ ಒಂದು ವರ್ಷದ ಹಿಂದೆ ನನ್ನ ಫೋನ್ ಕಳೆದುಹೋಗಿತ್ತು. ನಾನು ದುಡಿದು ಸ್ವಂತ ಹಣದಿಂದ ಖರೀದಿಸಿದ್ದ ಫೋನ್ ಅದು. ನನ್ನ ತಂದೆ ಮೃತರಾದ 4 ತಿಂಗಳ ನಂತರ ಫೋನ್ ಕಳೆದುಕೊಂಡಿದ್ದೆ. ತಂದೆ ಮತ್ತು ನಮ್ಮ ಕುಟುಂಬದ ಮಧುರ ನೆನಪುಗಳಿಗೆ ಸಾಕ್ಷಿಯಾಗಿ ಸಾಕಷ್ಟು ಫೋಟೋಗಳು ಫೋನ್‌ನಲ್ಲಿ ಇದ್ದವು. ನನ್ನ ಶಾಲಾ ದಾಖಲೆಗಳೂ ಇದ್ದವು. ಫೋನ್ ಕಳೆದುಕೊಂಡಾಗ ತುಂಬಾ ದುಃಖವಾಗಿ ಅತ್ತಿದ್ದೆ. ಫೋನ್ ಮತ್ತೆ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಈಗ ಪೊಲೀಸರು ಮರಳಿ ಕೊಡಿಸಿದ್ದಾರೆ. ತುಂಬಾ ಖುಷಿ ಆಗಿದೆ.

"

ಕ್ರೀಡಾಕೂಟ ನೋಡಲು ಆಟದ ಮೈದಾನಕ್ಕೆ ತೆರಳಿದ್ದಾಗ 2023ರಲ್ಲಿ ನನ್ನ ಫೋನ್ ಕಳೆದುಹೋಗಿತ್ತು. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ನಮ್ಮ ಪೊಲೀಸರು ಫೋನ್ ಹುಡುಕಿ ಕೊಡುತ್ತಾರೆ ಎನ್ನುವ ನಂಬಿಕೆ ಇತ್ತು. ಹಾಗಾಗಿ ಎಫ್‌ಐಆರ್ ಪ್ರತಿ ಜೋಪಾನವಾಗಿ ಇಟ್ಟುಕೊಂಡಿದ್ದೆ. ಇದೀಗ ಫೋನ್ ಸಿಕ್ಕಿದೆ. ಪೊಲೀಸರ ಈ ಶ್ರಮಕ್ಕೆ ಎಷ್ಟು ಬೆಲೆ ಕಟ್ಟಿದರೂ ಸಾಲದು. ಇಂಥ ಕಾರ್ಯಾಚರಣೆ ನಿರಂತರವಾಗಿ ನಡೆದರೆ ಮೊಬೈಲ್ ಕಳ್ಳತನ ನಿಯಂತ್ರಣಕ್ಕೆ ಬರಬಹುದು.