ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ನೋಂದಣಿ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಡಾ.ವಿಶ್ವಾಸ್, ಡಾ.ಶಿವಪ್ಪ, ವಿಕ್ರಂ, ಸಾಗರ್, ಸುಧಾ ಇತರರು ಇದ್ದರು.
ಸಿದ್ದಾಪುರ: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಕ್ಷಯ ಚಾರಿಟಬಲ್ ಟ್ರಸ್ಟ್ ರೋಟರಿ ರೆಡ್ ಕ್ರಾಸ್ ಹಾಗೂ ಇತರ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಮತ್ತು ಅಂಗಾಂಗ ದಾನ ನೋಂದಣಿ ಶಿಬಿರ ಸೋಮವಾರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 21 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಅಂಗಾಂಗದಾನ, ರಕ್ತದಾನದ ಮಹತ್ವದ ಬಗ್ಗೆ ಡಾ.ವಿಶ್ವಾಸ್ ಅರಿವು ಮೂಡಿಸಿದರು. ಅಂಗಾಂಗ ದಾನ ನೋಂದಣಿಯ ಬಗ್ಗೆ ಡಿಎಚ್‌ಇಒ ಶಾಂತಿ ಅವರು ವಿವರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಗೆ ಗಳಗಂಡ ರೋಗ ಮತ್ತು ರಕ್ತಹೀನತೆ ಬಗ್ಗೆ ಮಾಹಿತಿ ನೀಡಲಾಯಿತು.
ಎಚ್‌ಸಿ ಚೆನ್ನಯ್ಯನಕೋಟೆ ಎಎಂಒ ಡಾ.ಶಿವಪ್ಪ ಮಾತನಾಡಿದರು. ವಿರಾಜಪೇಟೆ ತಾಲೂಕಿನ ಸುತ್ತಮುತ್ತಲಿನ ಹಾಡಿಗಳಲ್ಲಿ ಮಗುವಿಗೆ ಸೊಪ್ಪಿನ ರಸಗಳನ್ನು ಕುಡಿಸುತ್ತಿರುವುದರಿಂದ ಶಿಶು ಮರಣವಾಗುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು. ರಸ ಕುಡಿಸುವುದನ್ನು ತಡೆಯಲು ಅರಿವು ಮೂಡಿಸಲು ಸಹಕಾರವನ್ನು ಕೋರಲಾಯಿತು.
ಸಿಎಚ್‌ಒ ವಿಕ್ರಂ, ಸಾಗರ್, ಪಿಎಚ್‌ಸಿಒ ಸುಧಾ, ಆಶಾ ಕಾರ್ಯಕರ್ತೆ ಹೇಮಾವತಿ, ಆರ್‌ಕೆಎಸ್‌ಕೆ ಕೌನ್ಸಿಲರ್ ಸತೀಶ್, ಆಂಬುಲೆನ್ಸ್ ಚಾಲಕ ಚಂಗಪ್ಪ ಮತ್ತು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಅಜಿತ್ ಕರುಂಬಯ್ಯ, ಸಾರ್ವಜನಿಕರು ರಕ್ತದಾನ ಮಾಡಿದರು. ಆಶಿಕಾ, ಆಶಾ ಕಾರ್ಯಕರ್ತೆಯರಾದ ದಿವ್ಯಾ, ಜಲಜಾಕ್ಷಿ ಮತ್ತು ವೈದ್ಯಕೀಯ ವಿದ್ಯಾರ್ಥಿ ತುಷಾರ್ ಕುಲಕರ್ಣಿ, ಅಕ್ಷಯ ಚಾರಿಟಬಲ್ ಟ್ರಸ್ಟ್‌ನ ಪ್ರಮುಖರಾದ ಸೋಮಯ್ಯ ಇತರರು ಇದ್ದರು.