ಜಿಲ್ಲೆ

ಕೊಡಗು ವಿವಿ ವಿಲೀನ ಪ್ರಕ್ರಿಯೆ ಬೇಡ

ಎ. ಆರ್. ರಘುರಾಮ

ವಿರಾಜಪೇಟೆ: ಗುಡ್ಡಗಾಡು ಪ್ರದೇಶವಾದ ಮಡಿಕೇರಿ ಜಿಲ್ಲೆ ವಿದ್ಯಾರ್ಥಿಗಳ ಆಶಾಕಿರಣವಾದ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಬೇರೆ ವಿವಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಣಯವನ್ನು ವಿರಾಜಜಪೇಟೆ ಕೊಡವ ಸಮಾಜ ತೀವ್ರವಾಗಿ ವಿರೋಧಿಸಿದೆ. ವಿವಿಯನ್ನು ಈಗಿರುವಂತೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನುಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಮೈಸೂರು, ಬೆಂಗಳೂರು, ಮಂಗಳೂರು ವಿವಿ ಅವಲಂಬಿಸಬೇಕಾಗಿತ್ತು. ಕೊಡಗಿನಲ್ಲೇ ವಿವಿ ಆರಂಭಗೊಂಡ ಕಾರಣ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟು ವಿವಿಗೆ ಸೂಕ್ತ ಅನುದಾನ ನೀಡಿ ಯಥಾಸ್ಥಿತಿ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.