ಜಿಲ್ಲೆ

ಕೊಡಗು ವಿದ್ಯಾಲಯದ ವೆಬ್‌ಸೈಟ್‌ಗೆ ಚಾಲನೆ

ಮಡಿಕೇರಿ:

ಶಿಕ್ಷಣ ಸಂಸ್ಥೆಗಳು ಭಾರತೀಯತೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ಭೋದಿಸುವ ಕೇಂದ್ರಗಳಾಗಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದ್ದು, ಉತ್ತಮ ಸಂಸ್ಕಾರ ಹೊಂದಿದ ಮಕ್ಕಳೇ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದರು. ನಗರದ ಕೊಡಗು ವಿದ್ಯಾಲಯ ಶಾಲೆಯ ವೆಬ್ ಸೈಟ್ 'ಕೊಡಗು ವಿದ್ಯಾಲಯ ಡಾಟ್ ಕಾಮ್'ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಕೊಡಗು ವಿದ್ಯಾಲಯ ಶಾಲೆಯನ್ನು 43 ವರ್ಷಗಳ ಹಿಂದೆ ಪ್ರಾರಂಭಿಸುವಲ್ಲಿ ದೇಶದ ಸೇನಾ ಪಡೆಯ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮಹತ್ವದ ಕೊಡುಗೆ ಇದೆ. ಹೀಗಾಗಿ ಈ ಶಾಲೆಗೆ ಕಾರ್ಯಪ್ಪ ಅವರ ಹಾರೈಕೆ ಎಂದೆAದಿಗೂ ಇರುತ್ತದೆ. ಭಾರತೀಯ ಹಬ್ಬ, ಉತ್ಸವಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಕಲಿಸುವ ನಿಟ್ಟಿನಲ್ಲಿ ಕೊಡಗು ವಿದ್ಯಾಲಯ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಇಂಥ ಶಿಕ್ಷಣ ಸಂಸ್ಥೆಗಳ ಅಗತ್ಯ ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ.

ದೀಪಾವಳಿ ಸಂದರ್ಭ ಮಕ್ಕಳು ಮನೆಯಲ್ಲಿ ಮೊಬೈಲ್ ದಾಸರಾಗಿ ಮೊಬೈಲ್ ಪ್ರಪಂಚದಲ್ಲಿಯೇ ಮುಳುಗದೇ ಮನೆಯ ಹಿರಿಯರೊಂದಿಗೆ, ನೆರೆಕರೆಯವರೊಂದಿಗೆ ಸಂಭ್ರಮಿಸುತ್ತಾ ಹಬ್ಬದ ಸಂಭ್ರಮ ಸವಿಯಬೇಕು. ಹಿಂದಿನ ಕಾಲದಲ್ಲಿದ್ದಂತೆಯೇ ಇಂದಿನ ಹಿರಿಯರಿಗೂ ಮಕ್ಕಳು ತಮ್ಮೊಂದಿಗೆ ಉತ್ಸಾಹದಿಂದ , ಸಿಹಿಯನ್ನು ಹಂಚಿ ತಿನ್ನುತ್ತಾ, ಹಬ್ಬವನ್ನು ಆಚರಿಸಬೇಕೆಂಬ ಹಂಬಲ ಇರುತ್ತದೆ. ಈ ಬಯಕೆಯನ್ನು ಮಕ್ಕಳು ಈಡೇರಿಸುವ ಮೂಲಕ ದೀಪಾವಳಿಗೆ ಮತ್ತಷ್ಟು ಸಡಗರದೊಂದಿಗೆ ಹಬ್ಬವನ್ನು ಅರ್ಥಪೂರ್ಣವಾಗಿಸಬೇಕು ಎಂದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಸ್. ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ನೀಮಾ ಸಂಸ್ಥೆಯ ಅಧ್ಯಕ್ಷ ಡಾ. ರಾಜಾರಾಮ್, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ವೆಬ್ ಸೈಟ್ ವಿನ್ಯಾಸಗೊಳಿಸಿದ ಪ್ರತಿಷ್ಠ ಎ. ನೀಲಮ್ಮ ಕಾರ್ಯಪ್ಪ, ಪುಣ್ಯ ಗುರುದತ್, ಶಿಕ್ಷಕಿಯರಾದ ಭಾರತಿ, ನೇತ್ರ , ರೇಖಾ ಕೆ.ಕೆ., ವೀಣಾ ಮೊಣ್ಣಪ್ಪ ಇದ್ದರು.