ಜಿಲ್ಲೆ

ಕೊಡಗಿನ ವಿವಿಧೆಡೆ ಸಾಧಾರಣ ಮಳೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನ ಹಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿಯಲ್ಲಿ ಬೆಳಗ್ಗಿನಿಂದ ಮೋಡ ಮತ್ತು ಮಂಜು ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನ ವೇಳೆ ಜೋರಾಗಿ ಮಳೆ ಸುರಿಯಿತು. ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಮಧ್ಯಾಹ್ನ ತನಕ ಸಾಧಾರಣ ಮಳೆ ಇತ್ತು. ಕುಶಾಲನಗರ, ಸಿದ್ದಾಪುರ ಭಾಗದಲ್ಲಿ ವಾತಾವರಣ ಸಾಮಾನ್ಯವಾಗಿತ್ತು. ಮಾದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಮುಖ್ಯ ರಸ್ತೆಯಲ್ಲಿ ರಸ್ತೆಯ ಮೇಲೆ ಮರವೊಂದು ಉರುಳಿ ಬಿದ್ದಿತ್ತು. ಕೂಡಲೇ ಸ್ಥಳೀಯ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಮರ ತೆರವುಗೊಳಿಸಲಾಯಿತು

ಜಿಲ್ಲೆಯಲ್ಲಿ ಬುಧವಾರ ಸರಾಸರಿ ೩೪.೦೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೪.೯೭ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೯೪೩.೮೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೮೨೩.೨೩ ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ೩೫.೫೨ ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ ೩೩.೦೩ ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩೩.೭೩ ಮಿ.ಮೀ. ಸರಾಸರಿ ಮಳೆಯಾಗಿದೆ.

ಹೋಬಳಿವಾರು ಮಡಿಕೇರಿ ಕಸಬಾ ೨೮.೮೦, ನಾಪೋಕ್ಲು ೨೫.೨೦, ಸಂಪಾಜೆ ೩೭.೫೦, ಭಾಗಮಂಡಲ ೫೦.೬೦, ವಿರಾಜಪೇಟೆ ಕಸಬಾ ೧೭.೮೦, ಹುದಿಕೇರಿ ೩೭.೬೦, ಶ್ರೀಮಂಗಲ ೭೯.೨೦, ಪೊನ್ನಂಪೇಟೆ ೩೫, ಅಮ್ಮತ್ತಿ ೧೯, ಬಾಳೆಲೆ ೯.೬೦, ಸೋಮವಾರಪೇಟೆ ಕಸಬಾ ೫೫.೬೦, ಶನಿವಾರಸಂತೆ ೩೧.೨೦, ಶಾಂತಳ್ಳಿ ೭೯, ಕೊಡ್ಲಿಪೇಟೆ ೨೨.೬೦, ಕುಶಾಲನಗರ ೧.೮೦, ಸುಂಟಿಕೊಪ್ಪ ೧೨.೨೦ ಮಿ.ಮೀ.ಮಳೆಯಾಗಿದೆ.