ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕ್ಷೇತ್ರ ಪುನರ್ (೨೦೦೮) ವಿಂಗಡಣೆ ಬಳಿಕ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು (ಸತತ ಮೂರು ಅವಧಿ) ಸಾಧಿಸಿದೆ. ಕಾಂಗ್ರೆಸ್, ಜೆಡಿಎಸ್ ಕ್ಷೇತ್ರ ತನ್ನ ವಶಕ್ಕೆ ಪಡಿಸಿಕೊಳ್ಳಲು ಸತತವಾಗಿ ನಡೆಸುತ್ತಿರುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ೨೦೨೩ರ ಚುನಾವಣೆಯಲ್ಲಿ ಕ್ಷೇತ್ರ ತನ್ನದಾಗಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಸತತ ಪ್ರಯತ್ನದಲ್ಲಿದೆ.
ಹಾಲಿ ಶಾಸಕರೊಂದಿಗೆ ಬಿ.ಬಿ. ಭಾರತೀಶ್, ಬಿ.ಜೆ. ದೀಪಕ್, ಡಾ.ಬಿ.ಸಿ. ನವೀನ್‌ಕುಮಾರ್ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿ ದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ೭ ಆಕಾಂಕ್ಷಿಗಳು ಕೆಪಿಸಿಸಿಗೆ ೨ ಲಕ್ಷ ರೂಪಾಯಿ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಬಿ.ಎ. ಜೀವಿಜಯ. ಎಚ್. ಎಸ್. ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ಡಾ.ಮಂಥರ್‌ಗೌಡ, ಹರಪಳ್ಳಿ ರವೀಂದ್ರ, ಕೆ.ಎಂ. ಲೋಕೇಶ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ನಾಪಂಡ ಎಂ. ಮುತ್ತಪ್ಪ ಸ್ಪರ್ಧೆ ಬಹುತೇಕ ಖಚಿತವಾಗಿದೆ.
೨೦೦೮ ರ ಚುನಾವಣೆಯಲ್ಲಿ ಬಿಜೆಪಿ ೬,೫೮೫ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಒಟ್ಟು ಚಲಾವಣೆಯಾದ ಮತದ ಪೈಕಿ ಬಿಜೆಪಿ ಶೇ.೪೭.೦೬ ರಷ್ಟು ಮತ ಪಡೆದಿತ್ತು. ೨೦೧೩ ರಲ್ಲಿ ಬಿಜೆಪಿ ೪,೬೨೯ ಮತಗಳ ಅಂತರದಿಂದ ಗೆದ್ದಿತ್ತು. ಶೇ.೭೫.೮೯ ರಷ್ಟು ಮತದಾನ ವಾಗಿದ್ದು, ಬಿಜೆಪಿ ಶೇ.೩೬.೮೫ ರಷ್ಟು ಮತ ಪಡೆದಿತ್ತು. ೨೦೧೮ ರಲ್ಲಿ ಬಿಜೆಪಿ ೧೬,೦೧೫ ಮತಗಳ ಭರ್ಜರಿ ಜಯ ದಾಖಲಿಸಿತು. ಬಿಜೆಪಿ ಶೇ.೪೧.೬೮ ರಷ್ಟು ಮತ ಪಡೆದಿತ್ತು.
ಸೋಮವಾರಪೇಟೆ, ಕುಶಾಲನಗರ ತಾಲೂಕು ಹಾಗೂ ಮಡಿಕೇರಿ ತಾಲೂಕಿನ ಭಾಗಶಃ ಪ್ರದೇಶ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಮಡಿಕೇರಿ ನಗರಸಭೆ, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಪ್ರಸ್ತುತ ಕ್ಷೇತ್ರದಲ್ಲಿ ೨,೧೨,೭೨೬ ಮತದಾರರಿದ್ದಾರೆ. ೧,೦೫,೩೯೨ ಪುರುಷ ಹಾಗೂ ೧,೦೬,೮೭೯ ಮಹಿಳಾ ಮತದಾರರಿದ್ದಾರೆ.
ಸೋಮವಾರಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಆರ್. ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಮುಖ್ಯ ಮಂತ್ರಿ ಸೋಲಿಸಿದ್ದ ಹೆಗ್ಗಳಿಕೆಗೆ ಭಾಜನರಾಗಿರುವ ಬಿ.ಎ. ಜೀವಿಜಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಎ.ಎಂ. ಬೆಳ್ಯಪ್ಪ, ಡಿ.ಎ. ಚಿಣ್ಣಪ್ಪ, ಎಂ.ಎಂ. ನಾಣಯ್ಯ, ಹಾಲಿ ಶಾಸಕರು ಕೂಡ ಸಚಿವರಾಗಿದ್ದರು.
೨೦೧೮ರ ಫಲಿತಾಂಶ
೧. ಎಂ.ಪಿ. ಅಪ್ಪಚ್ಚು ರಂಜನ್ (ಬಿಜೆಪಿ)- ೭೦,೬೩೧
೨. ಬಿ.ಎ. ಜೀವಿಜಯ (ಜೆಡಿಎಸ್)- ೫೪,೬೧೬
೩. ಕೆ.ಪಿ. ಚಂದ್ರಕಲಾ (ಕಾಂಗ್ರೆಸ್)- ೩೮,೨೧೯
೪. ನೋಟಾ- ೧,೬೧೫
೫. ಸಿ.ಜೆ. ಭಾರ್ಗವ್ (ಎಬಿಎಚ್‌ಎಂ)- ೧,೧೨೪
೬. ಎ. ಮೊಹಮ್ಮದ್ ಹನೀಫ್ (ಸ್ವತಂತ್ರ)- ೧,೦೦೫
೭. ರಶೀದ್ ಬೇಗಂ (ಎಐಎಂಇಪಿ)- ೫೪೫
೮. ಪಿ.ಎಸ್. ಯಡೂರಪ್ಪ (ಸ್ವತಂತ್ರ)- ೪೮೩
೯. ಕೆ.ಬಿ. ರಾಜು (ಬಿಆರ್‌ಪಿಪಿ)- ೩೬೮
೧೦. ಬಿ.ಎಂ. ತಿಮ್ಮಯ್ಯ (ಸ್ವತಂತ್ರ)- ೩೩೧
೧೧. ಸಿ.ಯು. ಕೃಷ್ಣ (ಸ್ವತಂತ್ರ)- ೨೮೩
ಮಡಿಕೇರಿ ಶಾಸಕರು
ಮಡಿಕೇರಿ ಶಾಸಕರು
ಸೋಮವಾರಪೇಟೆ ಶಾಸಕರು