ಮಡಿಕೇರಿ: ಕೊಡಗು ಜಿಲ್ಲಾ ಕಿವುಡರ ಸಂಘದ ಮಹಾಸಭೆ ವಿರಾಜಪೇಟೆಯ ಪುರಸಭೆಯ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಜೋಸೆಫ್ ಶ್ಯಾಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ಪುನರ್ ರಚನೆ ಮಾಡಲಾಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಎಚ್.ಜಿ. ದಿವ್ಯ, ಉಪಾಧ್ಯಕ್ಷರಾಗಿ ಕೆ.ಕೆ.ಶಂಕರ್, ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ, ಜಂಟಿ ಕಾರ್ಯದರ್ಶಿಯಾಗಿ ರಮ್ಷದ್, ಖಜಾಂಚಿಯಾಗಿ ಸುರೇಶ್, ನಿರ್ದೇಶಕರಾಗಿ ವೆಂಕಟೇಶ್, ಗಣೇಶ್, ಅಸ್ಲಾಂ, ಛಾಯಾ, ಸುನಿಲ್, ಪ್ರಭಾಕರ್ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳು ನಡೆಸುವ ಮೂಲಕ ಸರ್ಕಾರದ ಸೌಲಭ್ಯಕ್ಕಾಗಿ ಸಂಬಂಧಿಸಿದವರನ್ನು ಭೇಟಿಯಾಗಿ, ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸಂಘ ಹಮ್ಮಿಕೊಳ್ಳಲಿದೆ, ಎಲ್ಲರ ಸಹಕಾರ ಅತ್ಯಗತ್ಯ ಎಂದು ಸಂಘದ ನೂತನ ಅಧ್ಯಕ್ಷೆ ಎಚ್.ಜಿ.ದಿವ್ಯ ಹೇಳಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.