ಮಡಿಕೇರಿ: ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ನೀಡಿದ ಸುತ್ತೋಲೆಗೆ ಅನುಗುಣವಾಗಿ ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳ ೫೪೩ ಮತಗಟ್ಟೆಗಳ ಬೂತ್ ಮಟ್ಟದ ಏಜೆಂಟರ(ಬಿ.ಎಲ್.ಎ-೨) ಅಧಿಕೃತ ಪಟ್ಟಿಯನ್ನು ಕೊಡಗು ಜಿಲ್ಲಾಧಿಕಾರಿಗಳಾದ ಡಾ.ಬಿ.ಸಿ.ಸತೀಶ್ ರವರಿಗೆ ಸಲ್ಲಿಸಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರವರು ೨೨೪ ಕ್ಷೇತ್ರಗಳಿಗೆ ಬಿ.ಎಲ್.ಎ-೧ ನೇಮಕ ಮಾಡಿದ್ದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಧರ್ಮಜ ಉತ್ತಪ್ಪನವರನ್ನು ನೇಮಕ ಮಾಡಿ ಚುನಾವಣಾ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ಚುನಾವಣಾ ಆಯೋಗದವರು ಪ್ರತಿಯೊಂದು ಬೂತ್ ಮಟ್ಟದಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ಸಂಭಂದ ಪಟ್ಟ ನೊಂದಣಿ ಅಧಿಕಾರಿಗಳ ಜೊತೆ ವ್ಯವಹರಿಸಲು ಬೂತ್ ಮಟ್ಟದ ಏಜೆಂಟರುಗಳನ್ನು ನೇಮಿಸಲು ಅಧಿಕೃತವಾಗಿ ರಾಜಕೀಯ ಪಕ್ಷಗಳಿಗೆ ಅವಕಾಶಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಚುನಾವಣೆ ಪ್ರಕ್ರಿಯೆಗಳು ಪಾರದರ್ಶಕ ವಾಗಿ ನಡೆಯಲು ಸಹಕಾರಿಯಾಗಿದೆ ಎಂದು ದರ್ಮಜ ಉತ್ತಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಎಲ್ಎ ಪಟ್ಟಿ ಸಲ್ಲಿಕೆ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಜೆ.ಜಿ.ಕಾವೇರಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ, ಡಿಸಿಸಿ ಸದಸ್ಯರಾದ ಮುಕ್ಕಾಟಿರ ಸಂದೀಪ್, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಬೊಳ್ಳದಂಡ ನಾಚಪ್ಪ ಉಪಸ್ಥಿತರಿದ್ದರು.