ಜಿಲ್ಲೆ

ತೌಕ್ತೆ ಚಂಡಮಾರುತ ಎಫೆಕ್ಟ್​: ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಪರದಾಟ

ಕೊಡಗು: ಕರೊನಾ ಸಂಕಷ್ಟದ ನಡುವೆ ರಾಜ್ಯಕ್ಕೆ ಎಂಟ್ರಿ ನೀಡಿರುವ ತೌಕ್ತೆ ಚಂಡಮಾರುತದ ಪರಿಣಾಮದಿಂದ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ.

ಶವಸಂಸ್ಕಾರಕ್ಕೆ ತಂದಿಟ್ಟ ಸೌದೆ ಮಳೆಗೆ ಒದ್ದೆಯಾಗಿದ್ದು, ಸ್ವಯಂಸೇವಕರು ಸೋಂಕಿತರ ಅಂತಿಮ ಕ್ರಿಯೆಗೆ ಹರಸಾಹಸ ಮಾಡುತ್ತಿದ್ದಾರೆ. ಜಿಟಿಜಿಟಿ ಮಳೆಯ ನಡುವೆಯೂ ಪಿಪಿಇ ಕಿಟ್, ರೈನ್ ಕೋಟ್ ಧರಿಸಿ ಸ್ವಯಂಸೇವಕರು ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿದ್ದಾರೆ.

ವಿಎಚ್‌ಪಿ, ಬಜರಂಗದಳ ಸ್ವಯಂಸೇವಕರು ಕಳೆದೊಂದು ವರ್ಷದಲ್ಲಿ 140ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ್ದಾರೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಮಡಿಕೇರಿಯ ಹಿಂದು‌ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡುವ ಮೂಲಕ ಅವಿರತ ಸೇವೆ ಮುಂದುವರಿಸಿದ್ದಾರೆ.

ಕೇವಲ ಕೊಡಗು ಮಾತ್ರವಲ್ಲದೇ ರಾಜ್ಯದ ವಿವಿಧಿ ಭಾಗಗಳಲ್ಲಿ ತೌಕ್ತೆ ಚಂಡಮಾರುತದ ಪರಿಣಾಮ ಬೀರಿದ್ದು, ಶವಸಂಸ್ಕಾರಕ್ಕೆ ಭಾರಿ ತೊಂದರೆ ಆಗಿದೆ. (ದಿಗ್ವಿಜಯ ನ್ಯೂಸ್​)