ಜಿಲ್ಲೆ

1.20 ಲಕ್ಷ ರೂ. ಮೌಲ್ಯದ ಆಕಳು ಕಳ್ಳತನ


ಹಿರೇಕೆರೂರ: ದನದ ಕೊಟ್ಟಗೆಯಲ್ಲಿ ಕಟ್ಟಿದ್ದ 1.20 ಲಕ್ಷ ರೂ. ಮೌಲ್ಯದ 2 ಜಸಿರ್ ಆಕಳುಗಳನ್ನು ಯಾರೋ ಕಳ್ಳತನ ಮಾಡಿದ ಟನೆ ತಾಲೂಕಿನ ಕೋಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಪುಲಕೇಶಪ್ಪ ತಿರಕಪ್ಪ ತುಳಜಮ್ಮನವರ (48) ಎಂಬುವರ ಆಕಳು ಕಳ್ಳತನವಾಗಿರುವುದು.
ಇವರು ತಮ್ಮ ಕೋಳಿ ಾಮ್​ರ್ ಪಕ್ಕದ ದನದ ಕೊಟ್ಟಿಗೆಯಲ್ಲಿ ಆಕಳುಗಳನ್ನು ಕಟ್ಟಿದ್ದರು. ಯಾರೋ ಖದೀಮರು ಅವುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.