ಜಿಲ್ಲೆ

ಕೋಚಿಮುಲ್ ಚುನಾವಣೆಗೆ ಪಟ್ಟು

ಕೋಲಾರ ಡೆಸ್ಕ್


ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಸಹಕಾರ ಸಂಘಗಳ ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದಿದ್ದು, ಕೂಡಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಗ್ರಾಮಗಳ ಪ್ರಾಥಮಿಕ ಹಾಲು ಸಹಕಾರ ಸಂಘಗಳ (ಎಂಪಿಸಿಎಸ್) ಅಧ್ಯಕ್ಷರು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಒಕ್ಕೂಟದ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಒಕ್ಕೂಟದ ಆಡಳಿತ ಮಂಡಳಿಯ ಅಧಿಕಾರಾವಧಿಯು ಮೇ 12ಕ್ಕೆ ಪೂರ್ಣಗೊಂಡಿದೆ. ಕೂಡಲೇ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು. ಆದರೆ ರಾಜಕೀಯ ದುರುದ್ದೇಶದಿಂದ ಚುನಾವಣೆ ಮುಂದೂಡಲಾಗುತ್ತಿದೆ ಎಂದು ದೂರಿದರು.


ಚುನಾವಣೆ ಸಂಬಂಧ ಹೈಕೋರ್ಟ್ 90 ದಿನದಲ್ಲಿ ಚುನಾವಣೆ ನಡೆಸಲು ಆದೇಶಿಸಿದ್ದು, ಈ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ನಿಗದಿಯಾಗಿದೆ. ಅದೇ ರೀತಿ ಕೋಚಿಮುಲ್ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದರು. ಚುನಾವಣೆ ನಡೆಸಲು ಈಗಾಗಲೇ ಮತದಾರರ ಪಟ್ಟಿ ಸೇರಿ ಇತರ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಅಧ್ಯಕ್ಷರಾಗಿ ಮಾಲೂರು ಶಾಸಕ ನಂಜೇಗೌಡರು ಇರುವುದರಿಂದ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಮೊದಲು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವ ಮೂಲಕ ಚುನಾವಣೆ ನಡೆಸಿ, ಎರಡೂ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.ಆಡಳಿತ ಮಂಡಳಿಯನ್ನು ವಜಾ ವಾಡಿ ಕೂಡಲೇ ಚುನಾವಣೆ ನಡೆಸಲು ಜು.7ರಂದು ಹೈಕೋರ್ಟ್ ಆದೇಶ ನೀಡಿದೆ. ಈ ಹಿಂದಿನ ರಿಟರ್ನಿಂಗ್ ಅಧಿಕಾರಿಯಿಂದ ಕರಡು ಮತದಾರರ ಪಟ್ಟಿ ಪ್ರಕಟ ವಾಡಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ವಾ.21ಕ್ಕೆ ಸ್ಥಗಿತಗೊಂಡಿದೆ. ಆ ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು ಎಂಬುದನ್ನು ಸೂಚಿಸಿದ್ದರೂ ಇದುವರೆಗೂ ಚುನಾವಣೆಗೆ ಸಂಬಂಧ ಯಾವುದೇ ಪ್ರಯತ್ನವನ್ನು ಅಧಿಕಾರಿಗಳು ಏಕೆ ವಾಡಿಲ್ಲ ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತಮುನಿಯಪ್ಪ ವಾತನಾಡಿ, ಬಾಗೇಪಲ್ಲಿಯಲ್ಲಿ ಇತ್ತೀಚೆಗೆ ಕರೆದಿದ್ದ ವಿಶೇಷ ಸಾವಾನ್ಯ ಸಭೆಯಲ್ಲಿ ಒಕ್ಕೂಟವನ್ನು ಪ್ರತ್ಯೇಕ ವಾಡಲು ನಿರ್ಣಯಿಸಲಾಗಿದೆ ಎಂದ ಅವರು, ಕಳೆದ ಸರ್ಕಾರವೇ ಅಧಿಕೃತವಾಗಿ ವಿಭಜನೆ ಮಾಡಿ ಆದೇಶ ಮಾಡಿದ್ದರು ಏಕೆ ರದ್ದುಗೊಳಿಸಬೇಕಿತ್ತು ಎಂದು ಕಿಡಿಕಾರಿದರು. ಚುನಾವಣೆ ನಡೆಸಲು ಕ್ರಮಕೈಗೊಳ್ಳದಿದ್ದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಸದರು, ಶಾಸಕರ ನೇತೃತ್ವದಲ್ಲಿ ಹಾಲು ಉತ್ಪಾದಕರು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಮಾತನಾಡಿ, ಜಿಲ್ಲಾಧಿಕಾರಿ ಅಕ್ರಂಪಾಷಾ, ಸಂಬಂಧಿಸಿದವರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು
ಎಂದು ಭರವಸೆ ನೀಡಿದರು.

ಇಡಿ ದಾಳಿ ಮಾಡಿದ್ದು ಇತಿಹಾಸ

ಒಕ್ಕೂಟ ರಚನೆಯಾದಾಗಿನಿಂದ ಅನೇಕ ಬಾರಿ ನೇಮಕಾತಿ ಪ್ರಕ್ರಿಯೆಗಳು ನಡೆದಿವೆ. ಎಂದೂ ಭ್ರಷ್ಟಚಾರ ನಡೆದಿಲ್ಲ. ಈ ಆಡಳಿತ ಮಂಡಳಿ ಅವಧಿಯಲ್ಲಿ ನೇಮಕಾತಿ ನಡೆದಿದ್ದು, ಹುದ್ದೆ ಹಂಚಿಕೆಗೆ ಹಣ ವಸೂಲಿ ಮಾಡಿರುವ ಆರೋಪದಡಿ ಇಡಿ ಅಧಿಕಾರಿಗಳು ದಾಳಿ ಮಾಡಿದೆ ಎಂದು ಒಕ್ಕೂಟದ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಆರೋಪಿಸಿದರು. ಒಂದು ಹುದ್ದೆಗೆ ಲಕ್ಷಾಂತರ ರೂ. ವಸೂಲಿ ಮಾಡಿರುವ ಆರೋಪ ಸಂಬಂಧ ವರದಿಯು ರಾಜ್ಯಪಾಲರ ಬಳಿಯಿದೆ. ಸರ್ಕಾರ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಚುನಾವಣೆ ಮುಂದೂಡಿಕೊಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಾವಧಿ ಮುಗಿದು 3 ತಿಂಗಳು ಕಳೆದಿದೆ, ಯಾವುದೇ ರೀತಿ ಆರ್ಥಿಕ ಚಟುವಟಿಕೆ, ತೀರ್ಮಾನಗಳನ್ನು ಕೈಗೊಳ್ಳಬಾರದು ಎಂದು ಕೋರ್ಟ್ ಸೂಚಿಸಿದೆ. ಆದರೂ ಸಹ ಆಡಳಿತ ಮಂಡಳಿ ಆದೇಶ ಉಲ್ಲಂಸಿದೆ. ಅಧ್ಯಕ್ಷರಿಗೆ, ನಿರ್ದೇಶಕರಿಗೆ ನೈತಿಕತೆಯಿದ್ದರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.