ಜಿಲ್ಲೆ

ಹೆಚ್ಚಿನ ನೆರವಿಗೆ ಡಿಡಿಪಿಐ ಮನವಿ

Chitradurga

ಚಿತ್ರದುರ್ಗ:ಕೋಡಯ್ಯನಹಟ್ಟಿ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರದುರ್ಗ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದಿಂದ ಗುರುವಾರ ಉಚಿತ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು.

ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ನೋಟ್‌ಬುಕ್,ಪೆನ್‌ಗಳನ್ನು ವಿತರಿಸಿ ಮಾತನಾಡಿ,ಸಂಘದವರ ಕಾರ‌್ಯವನ್ನು ಶ್ಲಾಘಿಸಿದರು. ಸಂಘ ಇನ್ನು ಹೆಚ್ಚಿನ ಸಂಖ್ಯೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂದು ಆಶಿಸಿದರು.

ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಪ್ರಕಾಶ್,ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ರಂಜ್ಯಾನಾಯ್ಕ, ಸಂಘದ ಅಧ್ಯಕ್ಷ ಅಬ್ದುಲ್‌ಮಜೀದ್,ಕಾರ‌್ಯದರ್ಶಿ ಜಿ.ಬಿ.ಶೇಖರಪ್ಪ,ನಗರಸಭಾ ಸದಸ್ಯ ವೆಂಕಟೇಶ್,

ಕ್ರಷರ್ ಮಾಲೀಕರಾದ ಜಿ.ಸಿ.ಸುರೇಶ್ ಬಾಬು,ಮೆದೇಹಳ್ಳಿ ಗ್ರಾಪಂ ಸದಸ್ಯನಿರಂಜನ್,ಅಭಿಷೇಕ್,ಸಂದೀಪ್‌ರೆಡ್ಡಿ,ಎಂ.ಕೆ.ಹಟ್ಟಿ ಗ್ರಾಪಂ ಸದಸ್ಯರಾದ ಮಂಜುಳಾ,ಬೈಯಪ್ಪ,ತಿಮ್ಮ ರಾಜು,ಪಾಲಾ ಕ್ಷಮ್ಮ,ಗಿರೀಶ್‌ಹಾಗೂ ರಾಜೀವ್,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಿವಲಿಂಗಪ್ಪ ಮತ್ತಿತರರು ಇದ್ದರು.

ಸಸಿ

ಈ ವೇಳೆ ಶಾಲಾ ಆವರಣದ ಸಸಿ ನೆಡಲಾಯಿತು.

--------